ಮತ್ತೊಬ್ಬ ಸಂಸದ ಕರೋನಾಗೆ ಬಲಿ

ಮತ್ತೊಬ್ಬ ಸಂಸದ ಕರೋನಾಗೆ ಬಲಿ

ಗಾಂಧಿನಗರ : ಖ್ಯಾತ ವಕೀಲ ಗುಜರಾತ್‌ನ ಬಿಜೆಪಿ ರಾಜ್ಯಸಭಾ ಸದಸ್ಯ ಅಭಯ್ ಭಾರದ್ವಾಜ್ ನಿನ್ನೆ ಕೋವಿಡ್-19 ಸಂಬಂಧಿಸಿದ ಸಮಸ್ಯೆಗಳಿಂದ ಚೆನ್ನೈ ನ ಆಸ್ಪತ್ರೆಯಲ್ಲಿ ನಿಧನರಾದರು.

66 ವರ್ಷದ ಭಾರದ್ವಾಜ್ ಕಳೆದ ಜೂನ್‌ನಲ್ಲಷ್ಟೇ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಪಕ್ಷದ ಸಭೆಗಳು ಮತ್ತು ರಾಜ್‌ಕೋಟ್‌ನಲ್ಲಿ ನಡೆದ ರೋಡ್ ಶೋಗೆ ಹಾಜರಾದ ಬಳಿಕ ಆಗಸ್ಟ್ 31 ರಂದು ಅವರಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿತ್ತು.

ಸಂಸದ ಅಭಯ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಗುಜರಾತ್‌ನ ರಾಜ್ಯಸಭಾ ಸಂಸದರಾದ ಅಭಯ್ ಭಾರದ್ವಾಜ್ ಅವರು, ವಿಶೇಷ ವಕೀಲರಾಗಿದ್ದರು ಮತ್ತು ಸಮಾಜ ಸೇವೆ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು.

Related