100 ದಿನ ಪೂರೈಸಿದ ಕೆಜಿಎಫ್ – 2..

  • In Cinema
  • July 22, 2022
  • 231 Views
100 ದಿನ ಪೂರೈಸಿದ ಕೆಜಿಎಫ್ – 2..

ಕನ್ನಡದ ಸೂಪರ್ ಹಿಟ್, ಬ್ಲಾಕ್ ಬಸ್ಟರ್ ಸಿನಿಮಾ ‘ಕೆಜಿಎಫ್ 2’ ರಣಕಹಳೆ ಮತ್ತೆ ಸದ್ದು ಮಾಡುತ್ತಿದೆ. ಅಷ್ಟಕ್ಕೂ ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಿದ್ದೂ, ಆಗಿದ್ದೂ ದಿನಗಳು ಉರುಳಿದರೂ, ಈ ಚಿತ್ರದ ಹವಾ ಮಾತ್ರ ಕಡಿಮೆ ಆಗಿಲ್ಲ. ಒಂದಲ್ಲಾ ಒಂದು ವಿಚಾರಕ್ಕೆ ‘ಕೆಜಿಎಫ್ 2’ ಸದ್ದು ಮಾಡುತ್ತಲೇ ಇದೆ.

‘ಕೆಜಿಎಫ್ 2’ ಸಿನಿಮಾ ರಿಲೀಸ್ ಮುಂಚೆ ಹುಟ್ಟುಹಾಕಿದ ಎಲ್ಲಾ ನಿರೀಕ್ಷೆಗಳನ್ನು ಮೀರಿದೆ. ವಿಶ್ವಾದ್ಯಂತ ‘ಕೆಜಿಎಫ್ 2’ ಮಾಡಿದ ಅಬ್ಬರ, ಇಡಿ ವಿಶ್ವವೇ ಕನ್ನಡ ಸಿನಿಮಾರಂಗದತ್ತ ತಿರುಗಿ ನೋಡುವಂತೆ ಮಾಡಿತ್ತು. ಇದೀಗ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

‘ಕೆಜಿಎಫ್ 2’ ಸಿನಿಮಾದ ನಿನ್ನೆ, ಮೊನ್ನೆ ರಿಲೀಸ್ ಆಯ್ತೇನೋ ಅನ್ನೋ ಹಾಗಾದೆ, ಅಷ್ಟರ ಮಟ್ಟಿಗೆ ಈ ಚಿತ್ರದ ಬಗ್ಗೆ ಕ್ರೇಜ್ ಇನ್ನೂ ಇದೆ. ಆದರೆ ಅದಾಗಲೇ ಈ ಸಿನಿಮಾ 100 ದಿನಗಳನ್ನು ಪೂರೈಸಿದೆ. ‘ಕೆಜಿಎಫ್ 2’ ಚಿತ್ರಕ್ಕೆ ನೋಡ, ನೋಡುತ್ತಿದ್ದಂತೆಯೇ 100 ದಿನ ತುಂಬಿದೆ.

Related