ಕೆಜಿಎಫ್-2 ಚಿತ್ರ ವೀಕ್ಷಿಸಿದ ಕಮಲ್ ಹಾಸನ್, ಇಳಯರಾಜ

  • In Cinema
  • April 29, 2022
  • 218 Views
ಕೆಜಿಎಫ್-2 ಚಿತ್ರ ವೀಕ್ಷಿಸಿದ ಕಮಲ್ ಹಾಸನ್, ಇಳಯರಾಜ

ಸಂಗೀತ ಲೋಕ ದಿಗ್ಗಜ, ಸಂಗೀತ ಮಾಂತ್ರಿಕ ಇಳಯರಾಜ ಹಾಗೂ ನಟ ಕಮಲ್ ಹಾಸನ್ ಕೆಜಿಎಫ್-2 ಸಿನಿಮಾವನ್ನ ಒಟ್ಟಗೆ ಕುಳಿತು ವೀಕ್ಷಿಸಿದ್ದಾರೆ. ಚೆನ್ನೈ ನಲ್ಲಿ ಇಬ್ಬರು ಸಿನಿಮಾ ನೋಡಿದ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ಯಾನ್ ಇಂಡಿಯಾ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ.ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡಿ ಬೀಗುತ್ತಿರುವ ಕೆಜಿಎಫ್-2 1000 ಕೋಟಿ ರೂಪಾಯಿ  ಗಳಿಕೆ ಮಾಡಿವ ಮೂಲಕ ಭಾರತದ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾಗಳ ಲಿಸ್ಟ್ ಸೇರಿದೆ. ಸದ್ಯ ಸಿನಿಮಾ ಬಿಡುಗಡೆಯಾಗಿ 16 ದಿನಗಳಾಗಿದ್ದು ಈಗಾಲೂ ಅಭಿಮಾನಿಗಳು ಮುಗಿಬುದ್ದು ಸಿನಿಮಾ ವೀಕ್ಷಸುತ್ತದ್ದಾರೆ. ಸಿನಿಮಾ ರಿಲೀಸ್ ಆಗಿ ಇಷ್ಟು ದಿನವಾದರೂ ಅಭಿಮಾಗಳಿಲ್ಲಿ ಮಾತ್ರ ಸಿನಿಮಾದ ಕ್ರೇಜ್ ಇನ್ನೂ ಕಡಿಮೆ ಆಗಿಲ್ಲ.

ಕೆಜಿಎಫ್-2 ಸಿನಿಮಾ ನೋಡಲು ಸಿನಿ ಪ್ರೇಕ್ಷಕರು ಥಿಯೇಟರ್ ನತ್ತ ಮುಖ ಮಾಡುತ್ತದ್ದಾರೆ. ಇನ್ನು ಈ ಸಿನಿಮಾ ನೋಡಿ ಪರಭಾಷೆಯ ಸಿನಿ ಸ್ಟಾರ್ ಗಳಿಂದ ಸಹ ಉತ್ತಮ ಪ್ರತಿಕ್ರಿಯೆ  ವ್ಯಕ್ತವಾಗಿದೆ. ರಾಮ್ ಚರಣ್, ಅಲ್ಲು ಅರ್ಜುನ್, ಪ್ರಬಾಸ್, ಸೇರಿದಂತೆ ಅನೇಕ ಗಣ್ಯರು ಸಿನಿಮಾ ನೋಡಿ ಹೊಗಳಿದ್ದಾರೆ. ಇದೀಗ ಸಂಗೀತ ಲೋಕದ ದಿಗ್ಗಜ, ಸಂಗೀತ ಮಾತ್ರಿಕ ಇಳಯರಾಜ ಹಾಗೂ ಕಾಲಿವುಡ್ ನಟ ಕಮಲ್ ಹಾಸನ್ ಕೆಜಿಎಫ್-2 ಸಿನಿಮಾವನ್ನ ಒಟ್ಟಿಗೆ ಕೂಳಿತು ವೀಕ್ಞಿಸಿದ್ದಾರೆ.

 

Related