ಬಿಗ್ ಬಾಸ್ 10 ಟ್ರೋಫಿ ಮುಡಿಗೇರಿಸಿಕೊಂಡ ಕಾರ್ತಿಕ್

ಬಿಗ್ ಬಾಸ್ 10 ಟ್ರೋಫಿ ಮುಡಿಗೇರಿಸಿಕೊಂಡ ಕಾರ್ತಿಕ್

ಬೆಂಗಳೂರು: ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಎಂದರೆ ಅದು ಬಿಗ್ ಬಾಸ್. ಬಿಗ್ ಬಾಸ್ ಸೀಸನ್ 10 ನಿನ್ನೆ ಗ್ರಾಂಡ್ ಫಿನಾಲೆ ನಡೆದಿದ್ದು, ಈ ಗ್ರಾಂಡ್ ಫಿನಾಲೆಯಲ್ಲಿ ಕಾರ್ತಿಕ್ ಮಹೇಶ್ ಅವರು ಗೆದ್ದು ಬಿಗಿದ್ದಾರೆ.

ಹೌದು, ಈ ಬಾರಿ ನಡೆದ ಬಿಗ್ ಬಾಸ್ ನಲ್ಲಿ ವಿಶೇಷವಾಗಿ 112 ದಿನಗಳ ಸಂಚಿಕೆಯಾಗಿದ್ದು ಈ  ಸಂಚಿಕೆಗಳಲ್ಲಿ ಪ್ರತಿಯೊಂದು ಸಂಚಿಕೆಯು ವಿಭಿನ್ನವಾದ ಟಾಸ್ಕಳ ಮೂಲಕ ಸ್ಪರ್ಧಿಗಳಿಗೆ ಆಟ ಆಡಿಸಿದ್ದಾರೆ.

ಈ ಎಲ್ಲ ಗೇಮ್ ಗಳನ್ನು ಮತ್ತು ಇನ್ನಿತರ ವಿಷಯಗಳನ್ನು ಪರಿಶೀಲಿಸಿ ಮತ್ತು ಜನರ ಓಟ್ ಗಳನ್ನು ಪರಿಶೀಲಿಸಿ ಗ್ರಾಂಡ್ ಫಿನಾಲೆಗೆ ವಿನ್ನರನ್ನು ಸೆಲೆಕ್ಟ್ ಮಾಡಲಾಗುತ್ತದೆ.

ಎಲ್ಲ ಅರ್ಹತೆಯನ್ನು ಗಿಟ್ಟಿಸಿಕೊಂಡಿರುವ ಕಾರ್ತಿಕ್ ಮಹೇಶ್ ಅವರು ಬಿಗ್ ಬಾಸ್ ಸೀಸನ್ ಹತ್ತರ ಟ್ರೋಫಿಯನ್ನು ಗೆದ್ದಿದ್ದಾರೆ.

ಇನ್ನು ಜನವರಿ 28ರಂದು ಮಧ್ಯರಾತ್ರಿಯವರಿಗೆ ಈ ರಿಯಾಲಿಟಿ ಶೋವನ್ನು ನಟ ಕಿಚ್ಚ ಸುದೀಪ್ ಅವರು ನಡೆಸಿಕೊಟ್ಟಿದ್ದು, ಫಿನಾಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷ ಐದು ಜನ ಮಾತ್ರವಲ್ಲದೆ ಆರು ಜನರನ್ನು ಆಯ್ಕೆ ಮಾಡುವ ಮೂಲಕ ಫಿನಾಲೆಗೆ ಸಂಚಿಕೆಯನ್ನು ಮುಗಿಸಿದ್ದಾರೆ.

ಇನ್ನು ಕಾರ್ತಿಕ್ ಮಹೇಶ್ ಅವರಿಗೆ 50 ಲಕ್ಷ ರೂಪಾಯಿ ಹಣ ಸಿಕ್ಕಿದೆ. ಇದರ ಜೊತೆಗೆ ಮಾರುತಿ ಸುಜುಕಿ ಬ್ರೆಜಾ ಕಾರು ಕೂಡ ಸಿಕ್ಕಿದೆ. ಬೌನ್ಸ್ ಎಲಿಕ್ಟ್ರಿಕ್ ಸ್ಕೂಟರ್ ಅವರಿಗೆ ಗಿಫ್ಟ್ ಆಗಿ ಬಂದಿದೆ. ಗೆದ್ದ ಸ್ಪರ್ಧಿಗಳಿಗೆ ಸಂಪೂರ್ಣವಾಗಿ 50 ಲಕ್ಷ ರೂಪಾಯಿ ಸಿಗುವುದಿಲ್ಲ.

ಐದನೇ ರನ್ನರ್ ಅಪ್ ಆಗಿ ತುಕಾಲಿ ಸಂತೋಷ್ ಅವರು ಹೊರಗೆ ಬಂದಿದ್ದಾರೆ. ಅವರಿಗೆ 2 ಲಕ್ಷ ರೂಪಾಯಿ ಬಹುಮಾನ ಹಣ ಸಿಕ್ಕಿದೆ. ನಾಲ್ಕನೇ ರನ್ನರ್ ಅಪ್​​ ವರ್ತೂರು ಸಂತೋಷ್​ಗೂ ಎರಡು ಲಕ್ಷ ರೂಪಾಯಿ ಸಿಕ್ಕಿದೆ. ಮೂರನೇ ರನ್ನರ್ ಅಪ್​ ವಿನಯ್​ಗೆ ಐದು ಲಕ್ಷ ರೂಪಾಯಿ, ಎರಡನೇ ರನ್ನರ್​ಅಪ್​ ಸಂಗೀತಾ ಶೃಂಗೇರಿ ಏಳು ಲಕ್ಷ ರೂಪಾಯಿ, ಮೊದಲ ರನ್ನರ್ ಅಪ್ ಡ್ರೋನ್ ಪ್ರತಾಪ್​ಗೆ 10 ಲಕ್ಷ ರೂಪಾಯಿ ಹಣ ಸಿಕ್ಕಿದೆ. ಗೆದ್ದ ಸ್ಪರ್ಧಿ ಕಾರ್ತಿಕ್ ಮಹೇಶ್​ಗೆ ಸಿಕ್ಕಿದ್ದು 50 ಲಕ್ಷ ರೂಪಾಯಿ.

 

 

Related