ಇಸ್ರೇಲಿಂದ ವಾಪಸ್ಸಾದ ಕನ್ನಡಿಗರು

ಇಸ್ರೇಲಿಂದ ವಾಪಸ್ಸಾದ ಕನ್ನಡಿಗರು

ದೆಹಲಿ: ಹಮಾಸ್ ಉಗ್ರರು ಇಸ್ರೇಲ್‌ ನೆಲಕ್ಕೆ ಲಗ್ಗೆ ಇಟ್ಟು ಇಸ್ರೇಲ್ ದೇಶದ ನೂರಾರು ಪ್ರಜೆಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿರುವ ಹಿನ್ನೆಲೆಯಲ್ಲಿ, ಇಸ್ರೇಲ್ ಸೇನೆ ಗಾಜಾಪಟ್ಟಿ ಮೇಲೆ ಬಾಂಬ್‌ಗಳ ಮಳೆ ಸುರಿಸುತ್ತಿದೆ. ಗಾಜಾಪಟ್ಟಿಗೆ ಸರಬರಾಜು ಆಗುತ್ತಿದ್ದ ಆಹಾರ, ನೀರು, ಗ್ಯಾಸ್ ಹಾಗೂ ವಿದ್ಯುತ್ ಸಂಪರ್ಕ ಕಡಿತ ಮಾಡಿದೆ. ಈ ಹಿನ್ನೆಲೆಯಲ್ಲಿ ಗಾಜಾಪಟ್ಟಿಯ ಪರಿಸ್ಥಿತಿ ಭೀಕರವಾಗಿದ್ದು, ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿಶ್ವ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.

ಇನ್ನು ಇಸ್ರೇಲ್ ನಲ್ಲಿ ನಮ್ಮ ಭಾರತದ ಸಾವಿರಾರು ಜನರು ತಮ್ಮ ಕೆಲಸಕ್ಕೆಯಂದು ಹೋಗಿದ್ದು ಇವರನ್ನು  ಭಾರತ ಸರ್ಕಾರ ವಾಪಸ್ ತಾಯ್ನಾಡಿಗೆ ಕರೆತರುವ ಕೆಲಸ ಮಾಡುತ್ತಿದೆ. ಇಸ್ರೇಲಿನಲ್ಲಿದ್ದ ಕನ್ನಡಿಗರು ಕೂಡ ತಮ್ಮ ತಾಯ್ನಾಡಿಗೆ ವಾಪಸ್ ಆಗಿದ್ದಾರೆ.

ಆಪರೇಶನ್ ಅಜಯ್ ಭಾಗವಾಗಿ ಭಾರತೀಯ ವಾಯುಸೇನೆಯ ವಿಮಾನವು ಇಸ್ರೇಲ್ ನಲ್ಲಿದ್ದ ಭಾರತೀಯರನ್ನು ವಾಪಸ್ಸು ಕರೆತರುವ ಕಾರ್ಯಾಚರಣೆ ಆರಂಭವಾಗಿದ್ದು ಮೊದಲ ಬ್ಯಾಚ್ ನಲ್ಲಿ 212 ಜನ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ. ದೆಹಲಿಯಲ್ಲಿ ಬಂದಿಳಿದವರ ಪೈಕಿ ಐವರು ಕನ್ನಡಿಗರಾಗಿದ್ದು  ಅವರುಲ್ಲಿ ಜಯೇಷ್ ಹೇಳುವ ಪ್ರಕಾರ ಇಸ್ರೇಲ್ ನಲ್ಲಿರುವ ಭಾರತೀಯರಿಗೆ ಆತಂಕಪಡುವ ಸ್ಥಿತಿಯೇನೂ ಇಲ್ಲ, ಅವರೆಲ್ಲ ಸುರಕ್ಷಿತವಾಗಿದ್ದಾರೆ. ಕನ್ನಡಿಗರು ಇಸ್ರೇಲ್ ನ ಯಾವ್ಯಾವ ಭಾಗದಲ್ಲಿದ್ದಾರೆ ಎನ್ನುವ ಬಗ್ಗೆ ತನಗೆ ಮಾಹಿತಿ ಇಲ್ಲವೆಂದು ಹೇಳುವ ಅವರು, ಭಾರತೀಯರ ಸುರಕ್ಷತೆ ವಿಷಯದಲ್ಲಿ ಗಾಬರಿಯಾಗಬೇಕಿಲ್ಲ, ಅವರನ್ನು ವಾಪಸ್ಸು ಕರೆತರುವ ಕೆಲಸವನ್ನು ಭಾರತ ಸರ್ಕಾರ ಮಾಡುತ್ತಿದೆ ಎಂದರು. ಜಯೇಷ್, ಗಾಜಾ ಬಾರ್ಡರ್ ನಿಂದ ಸುಮಾರು 70-75 ಕಿಮೀ ದೂರದ ಅರಿಯಲ್ ಎಂಬ ಪ್ರದೇಶದಲ್ಲಿ ವಾಸವಾಗಿದ್ದರಂತೆ. ಇಸ್ರೇಲ್ ನಲ್ಲಿ ಪರಿಸ್ಥಿತಿ ಸಾಮಾನ್ಯಗೊಂಡ ಬಳಿಕ ವಾಪಸ್ಸು ಹೋಗುವುದಾಗಿ ಅವರು ಹೇಳಿದರು.

Related