ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಕೊರೋನಾ

 ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಕೊರೋನಾ

ರಾಮದುರ್ಗ:ಪಟ್ಟಣದ ಸರಾಪ (ಬಂಗಾರ) ವ್ಯಾಪಾರಸ್ಥರೊಬ್ಬರು, ಸ್ಥಳೀಯ ಕೆಎಸ್‌ಆರ್‌ಟಿ ಸಿಬ್ಬಂದಿಗಳಿಬ್ಬರು ಸೇರಿದಂತೆ ಪಟ್ಟಣ ಹಾಗೂ ತಾಲೂಕಿನಲ್ಲಿ   ೯ ಜನರಿಗೆ ಕೊರೋನಾ ಸೋಂಕು ದೃಡಪಟ್ಟು ಸೋಂಕಿತರ ಸಂಖ್ಯೆ ೧೨೬ ಕ್ಕೆ ಏರಿದಂತಾಗಿದೆ.

ರಾಮದುರ್ಗ ಪಟ್ಟಣ ೫, ಕೆಎಸ್‌ಆರ್‌ಟಿಸಿ ಸಿಬ್ಬಂದಿ ೨, ಕಟಕೋಳ, ಚುಂಚನೂರ ಗ್ರಾಮಗಳ ತಲಾ ಓರ್ವರಿಗೆ ಸೋಂಕು ಧೃಡ ಪಟ್ಟಿದೆ. ಸೋಂಕು ದೃಡಪಟ್ಟ ವ್ಯಕ್ತಿಗಳ ಮನೆಯ ಸುತ್ತ ೫೦ ಮೀಟರ್ ಅಂತರದಲ್ಲಿ ಕಂದಾಯ ಹಾಗೂ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿಕೊಂಡು ಮುಳ್ಳುಬೇಲಿ ಹಾಕಿ ಸೀಲ್‌ಡೌನ ಮಾಡಿದ್ದಾರೆ.

೧೨೬ ಪ್ರಕರಣಗಳಲ್ಲಿ ೮೩ ಜನ ಗುಣಮುಖರಾಗಿದ್ದಾರೆ. ಇನ್ನೂ ೪೧ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಸಂಗ್ರಹಿಸಲಾಗಿರುವ ೨೨೯೩ ಸ್ಯಾಬ್‌ಗಳಲ್ಲಿ ೨೨೧೯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ ೧೨೬ ಸೋಂಕಿತ ಪ್ರಕರಣಗಳು ಕಂಡು ಬಂದಿವೆ. ಇನ್ನೂ ೭೪ ಪ್ರಕರಣಗಳ ಸ್ಯಾಬ್ ಬಾಕಿ ಉಳಿದಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಶಶಿಧರ ಕಾಗವಾಡ, ಆರೋಗ್ಯ ನಿರೀಕ್ಷಕ ಚಂದನಗೌಡ ಪಾಟೀಲ, ಕಂದಾಯ ನಿರೀಕ್ಷಕ ಶಿವು ಗೋರವನಕೊಳ್ಳ, ಕಂದಾಯ ನಿರೀಕ್ಷಕ ಮಹೇಶ ಟೆಂಗಿನಕಾಯಿ ಸೇರಿದಂತೆ ಸಿಬ್ಬಂದಿ ಇದ್ದರು.

Related