ಕೃಷಿಕಾಯ್ದೆಗಳ ವಿರೋಧಿಸಿ ಜನತಾ ಪರೇಡ್

ಕೃಷಿಕಾಯ್ದೆಗಳ ವಿರೋಧಿಸಿ ಜನತಾ ಪರೇಡ್

ಕಲಬುರ್ಗಿ : ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳು ಮತ್ತು ರಾಜ್ಯ ಸರ್ಕಾರದ ಭೂ ಸುಧಾರಣೆ ಕಾಯ್ದೆತಿದ್ದುಪಡಿ ಹಿಂಪಡೆಯವAತೆ ಆಗ್ರಹಿಸಿ ನಗರದಲ್ಲಿ ಬೃಹತ್ ಜನತಾ ಪರೇಡ್ ಆರಂಭಿಸಲಾಗಿದೆ.

ಎಪಿಎಂಸಿ ತಿದ್ದುಪಡಿ ಕಾಯ್ದೆ, ಕನಿಷ್ಠ ಬೆಂಬಲ ಬೆಲೆ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಹೋರಾಟ ನಿತರ ರೈತರು ಗಣರಾಜ್ಯೋತ್ಸವ ದಿನವೇ ಟ್ರ‍್ಯಾಕ್ಟರ್ ರ್ಯಾಲಿಗೆ ಕರೆ ಕೊಟ್ಟಿದ್ದು, ಇದರ ಭಾಗವಾಗಿಯೇ ಸಂಯುಕ್ತ ಕಿಸಾನ್ ಮೋರ್ಚಾ ವೇದಿಕೆ ನೇತೃತ್ವದಲ್ಲಿ ಜನತಾ ಪರೇಡ್ ನಡೆಸಲಾಗುತ್ತಿದೆ.

ಇಲ್ಲಿನ ಹುಮನಾಬಾದ್ ರಿಂಗ್ ರೋಡ್ ನಿಂದ ಪರೇ ಆರಂಭವಾಗಿದ್ದು, ನೂರಾರು ಟ್ರ‍್ಯಾಕ್ಟರ್‌ಗಳು ಹಾಗೂ ಸಾವಿರಾರು ರೈತರು, ಕೂಲಿ ಕಾರ್ಮಿಕರು ಹಾಗೂ ಹಲವು ಮುಖಂಡರು ಪರೇಡ್ ನಲ್ಲಿ ಪಾಲ್ಗೊಂಡಿದ್ದಾರೆ.

ನಗರದ ಮುಖ್ಯ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಯವರಗೆ ಸುಮಾರು ಆರು ಕಿ.ಮೀ. ಈ ಪರೇಡ್ ನಡೆಯಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಹಲವು ಮಹಿಳೆಯರು ಟ್ರ‍್ಯಾಕ್ಟರುಗಳ ಎಂಜಿನ್ ಮೈ ಮೇಲಿರುವ ಟಾಪಿನಲ್ಲಿ ಏರಿ ಕಳಿತು ಘೋಷಣೆ ಮೊಳಗಿಸಿದರು.

ಕೇಂದ್ರ, ರಾಜ್ಯ ಸರ್ಕಾರ, ಪ್ರಧಾನಿ ಮೋದಿ ವಿರುದ್ಧ ಧಿಕ್ಕಾರ ಕೂಗಿದರು.

Related