ನಕ್ಷೆ ಮಂಜೂರಿಗೆ ಜನ ಪದೇ, ಪದೇ ಬಿಬಿಎಂಪಿಯ ಬಾಗಿಲು ತುಳಿಯುವುದು ತಪ್ಪುತ್ತದೆ: ಡಿಸಿಎಂ

ನಕ್ಷೆ ಮಂಜೂರಿಗೆ ಜನ ಪದೇ, ಪದೇ ಬಿಬಿಎಂಪಿಯ ಬಾಗಿಲು ತುಳಿಯುವುದು ತಪ್ಪುತ್ತದೆ: ಡಿಸಿಎಂ

ಬೆಂಗಳೂರು: ಪ್ರಮಾಣಿಕೃತ ಲೆಕ್ಕಪರಿಶೋಧಕರು ಇರುವಂತೆ, ಪ್ರಮಾಣೀಕೃತ ಕಟ್ಟಡ ವಾಸ್ತುಶಿಲ್ಪಿಗಳಿಗೆ ನಿವೇಶನಗಳ ಕಟ್ಟಡಗಳ ನಕ್ಷೆ ಸ್ವಯಂ ದೃಢೀಕರಿಸುವ ಅವಕಾಶ ನೀಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಅವರಿಂದು ಭಾರತೀಯ ಕಟ್ಟಡ ಒಳಾಂಗಣ ವಿನ್ಯಾಸಕಾರರ ಸಂಸ್ಥೆಯ ಬೆಂಗಳೂರು ವಿಭಾಗವು, ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಆಯೋಜಿಸಿರುವ “ಡಿಸೈನೂರು’ ಒಳಾಂಗಣ ವಿನ್ಯಾಸ ಹಬ್ಬವನ್ನು ಡಿಸಿಎಂ ಡಿ ಕೆ ಶಿವಕುಮಾರ್ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ನಕ್ಷೆ ಮಂಜೂರಿಗೆ ಜನ ಪದೇ, ಪದೇ ಬಿಬಿಎಂಪಿಯ ಬಾಗಿಲು ತುಳಿಯುವುದು ತಪ್ಪುತ್ತದೆ. ಅಧಿಕಾರಿಗಳ ಕಿರುಕುಳ ಸೇರಿದಂತೆ ಕೆಲಸ ವಿಳಂಬವಾಗುವುದೂ ತಪ್ಪುತ್ತದೆ. ಈ ನೆಲದ ಕಾನೂನಿನ ಅರಿವಿರುವ ಕಟ್ಟಡ ವಾಸ್ತುಶಿಲ್ಪಿಗಳು ಸರ್ಕಾರದ ನಿರ್ಣಯಕ್ಕೆ ಪೂರಕವಾಗಿ ಕೆಲಸ ಮಾಡಬೇಕು. ಜನಸಾಮಾನ್ಯರು ಮನೆ ಕಟ್ಟಲು ಪರದಾಡುವ ಸ್ಥಿತಿ ಈ ಕಾನೂನಿನಿಂದ ಪರಿಹಾರವಾಗಲಿದೆ. ನೀವೆಲ್ಲಾ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೀರಿ ಎನ್ನುವ ನಂಬಿಕೆ ನನಗಿದೆ.

 ಈಸಂದರ್ಭದಲ್ಲಿ ಪದ್ಮಶ್ರೀ ವಿಜೇತ ಖ್ಯಾತ ಬಿದರಿ ಕಲಾವಿದ ಶಾಹ್ ರಶೀದ್ ಅಹ್ಮದ್ ಖಾದ್ರಿ, ವಾಸ್ತುಶಿಲ್ಪಿಗಳಾದ ದಿನೇಶ್ ವರ್ಮಾ, ಕವಿತಾ ಶಾಸ್ತ್ರಿ, ಅಕ್ಷರ ವರ್ಮಾ, ಲೀನಾ ನಿಂಬಾಳ್ಕರ್, ಜುಬೈರ್ ಅಹ್ಮದ್, ಗಾಯತ್ರಿ ಶೆಟ್ಟಿ, ರೂಪ ಮೋಹನ್ ಮತ್ತಿತರರು ಭಾಗವಹಿಸಿದ್ದರು.

 

 

Related