ಪ್ರಕೃತಿ ರಕ್ಷಣೆ ನಮ್ಮೆಲ್ಲರ ಕರ್ತವ್ಯ

ಪ್ರಕೃತಿ ರಕ್ಷಣೆ ನಮ್ಮೆಲ್ಲರ ಕರ್ತವ್ಯ

ಔರಾದ: ತಾಲ್ಲೂಕಿನ ರಾಜಗೀರಾ ಗ್ರಾಮದಲ್ಲಿ ಮಾತೃಭೂಮಿ ಸೇವಾ ಪ್ರತಿಷ್ಠಾನದಿಂದ ಆಯೋಜಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅನ್ನ, ನೀರು, ಗಾಳಿ ಕೊಟ್ಟು ಕಾಪಾಡುವ ಪ್ರಕೃತಿಯನ್ನು ರಕ್ಷಿಸಲು ನಾವೆಲ್ಲರೂ ಪಣ ತೊಡಬೇಕಿದೆ ಎಂದು ಮಾತೃಭೂಮಿ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಗುರುನಾಥ ರಾಜಗೀರಾ ಅವರು ತಿಳಿಸಿದರು.

ಕಾಲಕಾಲಕ್ಕೆ ನಿಯಮಿತವಾಗಿ ಉತ್ತಮ ಮಳೆಯಾಗಬೇಕಾದರೆ ಗಿಡಮರಗಳು ಹೆಚ್ಚಿನ ಪ್ರಮಾಣದಲ್ಲಿರಬೇಕು. ಪಟ್ಟಣಗಳ ವಿಸ್ತೀರ್ಣ ಹಾಗೂ ಇನ್ನಿತರೆ ಅಭಿವೃದ್ಧಿ ಕೆಲಸಗಳ ಹೆಸರಿನಲ್ಲಿ ಮರಗಳನ್ನು ಕತ್ತರಿಸಲಾಗುತ್ತಿದೆ. ಇದರಿಂದ ಜಾಗತಿಕ ತಾಪಮಾನದಲ್ಲಿ ವ್ಯತ್ಯಾಸವಾಗುವುದರ ಜೊತೆಗೆ ಪರಿಸರದ ಮೇಲೆ ನಾನಾ ರೀತಿಯ ದುಷ್ಪರಿಣಾಮಗಳು ಬೀರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಮುಂದಿನ ಪೀಳಿಗೆಗೆ ಬದುಕಲು ಉತ್ತಮ ವಾತಾವರಣ ಸಿಗಬೇಕೆಂದರೆ ಈಗಿನಿಂದಲೇ ಪರಿಸರವನ್ನು ರಕ್ಷಿಸಬೇಕಿದೆ. ಪ್ರತಿಯೊಬ್ಬರು ಗಿಡಮರಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕು. ಪರಿಸರದ ರಕ್ಷಣೆಗೆ ನಿಲ್ಲಬೇಕು ಎಂದರು.
ಈ ಸಂದರ್ಭದಲ್ಲಿ ನಾಗಪ್ಪಾ ಅಡ್ಡೆ, ಶಿವರಾಜ ಅಡ್ಡೆ, ಸಂಗಮೇಶ ಅಡ್ಡೆ, ಸಾಯಿರತನ, ಸಾಯಿಶರಣ ಹಾಗೂ ಇನ್ನಿತರರಿದ್ದರು.

Related