ಜೀವನದಲ್ಲಿ ಶತ್ರುಗಳಿದ್ದರೆ ನಮಗೆ ಒಳ್ಳೆಯದೇ: ಬಿ.ಕೆ.ಹರಿಪ್ರಸಾದ್‌

ಜೀವನದಲ್ಲಿ ಶತ್ರುಗಳಿದ್ದರೆ ನಮಗೆ ಒಳ್ಳೆಯದೇ: ಬಿ.ಕೆ.ಹರಿಪ್ರಸಾದ್‌

ಬೆಂಗಳೂರು: ಜೀವನದಲ್ಲಿ ನಮಗೆ ಶತ್ರುಗಳಿದ್ದಷ್ಟು ಒಳ್ಳೆಯದು. ಆಗ ಮಾತ್ರ ನಾವು ಒಂದೊಳ್ಳೆ ಎತ್ತರದ ಸ್ಥಾನಮಾನವನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಕಾಂಗ್ರೆಸ್ಸಿನ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜಕೀಯವಾಗಿ ಸೈಲೆಂಟ್ ಆಗಿಲ್ಲ. ನನಗೆ ಗೊತ್ತಿರುವ ಹಾಗೆ ನಾನು ಹೇಳಿಕೆಗಳನ್ನು ಈಗಾಗಲೇ ಹೇಳುತ್ತಿದ್ದೇನೆ ಎಂದರು.

ಹೌದು, ಬಿಕೆ ಹರಿಪ್ರಸಾದ್ ಅವರು ಮತ್ತೆ ಸ್ವಪಕ್ಷೀಯರ ವಿರುದ್ಧ ಅಸಮಾಧಾನ ತೋಡಿಕೊಂಡರು. ಜಾತಿಗಣತಿ ಪರ ಅಹಿಂದ ಸಮಾವೇಶಕ್ಕೆ ಹೋಗುತ್ತೀರಾ ಎಂಬ ಪ್ರಶ್ನೆಗೆ, ಅಹಿಂದ ಸಮಾವೇಶಕ್ಕೆ ನಾನು ಹೋಗುವುದಿಲ್ಲ. ಗುರು ನಾರಾಯಣ ಪೀಠದಿಂದ ಜನವರಿಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಸಮಾವೇಶ ಇದೆ. ಅದಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಎಂದು ಹೇಳಿದ್ದೇನೆ ಎಂದರು.

ಇಲ್ಲಿಯವರೆಗೆ ಕಾಂಗ್ರೆಸ್ ಸರ್ಕಾರ ಹನಿಮೂನ್ ಪಿರಿಯಡ್​ನಲ್ಲಿತ್ತು. ಮುಂದೆ ನೈಜವಾಗಿ ಕೆಲಸ ಮಾಡಲು ಹೋದಾಗ ಎಲ್ಲವೂ ಗೊತ್ತಾಗುತ್ತದೆ.  ಅಧಿಕಾರಕ್ಕೆ ಬಂದವರು ಜನತೆಯ ಆಶಯಗಳನ್ನು ಈಡೇರಿಸಬೇಕು. ಈಡೇರಿಸಲು ಆಗದಿದ್ದಾಗ ಪಕ್ಷದ ಚೌಕಟ್ಟಿನಲ್ಲಿ ನಾನು ಪ್ರಶ್ನೆ ಮಾಡಿದ್ದೇನೆ. ಮಾಡುತ್ತಾ ಇರುತ್ತೇನೆ ಎಂದರು.

 

Related