ದಿಂಬಿನೊಳಗೆ ಅಡಗಿದ್ವು ಹಾವುಗಳು

ದಿಂಬಿನೊಳಗೆ ಅಡಗಿದ್ವು ಹಾವುಗಳು

ಲಂಡನ್ ,ಫೆ. 22 : ಬ್ರಿಟನ್ ನ ಸಂಡರ್ ಲ್ಯಾಂಡ್ ನ ಅಗ್ನಿಶಾಮಕ ಠಾಣೆ ಸಮೀಪದಲ್ಲಿ ದಿಂಬಿನೊಳಗೆ ಸೇರಿಕೊಂಡಿದ್ದ 29 ಹಾವುಗಳು ಪತ್ತೆಯಾಗಿವೆ.
ಉತ್ತರ ಇಂಗ್ಲೆಂಡ್ ನ ಪ್ರಾಣಿದಯಾ ಸಂಘ ಈ ಮಾಹಿತಿ ನೀಡಿದ್ದು, ಕಳೆದ ವಾರ ಎರಡು ದಿನಗಳಲ್ಲಿ ಈ ಹಾವುಗಳು ಸಿಕ್ಕಿದ್ದು ಇದರಲ್ಲಿ ಒಂದು ಹೆಬ್ಬಾವು ಕೂಡಾ ಸೇರಿದೆ. ಸಂರಕ್ಷಣಾ ದೃಷ್ಟಿಯಿಂದ ಆರೋಗ್ಯ ತಪಾಸಣೆ ನಡೆಸಿದ್ದು ಎಲ್ಲವೂ ಆರೋಗ್ಯವಾಗಿವೆ. ಚಂಡಮಾರುತ ಕಾಣಿಸಿರುವ ಪರಿಣಾಮ ಹಾವುಗಳು ಬಿಸಿ ವಾತಾವರಣ ಅರಸಿ ದಿಂಬಿನೊಳಗೆ ಸೇರಿವೆ ಎನ್ನಲಾಗಿದೆ.
ಏ ಹಾವಿಗೆ ತನ್ನ ದೇಹದಿಂದ ಉಷ್ಣತೆ ಹೊಂದಾಣಿಕೆ ಮಾಡಿಕೊಳ್ಳುವ ಸಾಮರ್ಥ್ಯ ಇಲ್ಲ. ಹಾಗಾಗಿ ಇಂತಹ ಹವಾಮಾನದ ವೇಳೆ ಬಿಸಿಯುಕ್ತ ಪ್ರದೇಶ ಅರಸುತ್ತವೆ ಎಂಬುದು ಪರಿಣಿತರ ಮಾತು. ಈ ಬಗ್ಗೆ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

Related