ರಾಜಸ್ಥಾನದಲ್ಲಿ ಅಮಾನವೀಯ ಘಟನೆ

ರಾಜಸ್ಥಾನದಲ್ಲಿ ಅಮಾನವೀಯ ಘಟನೆ

ಜೈಪುರ, ಏ. 06: ಮುಸ್ಲಿಂ ಎಂಬ ಕಾರಣಕ್ಕೆ ಮಹಿಳೆಗೆ ಹೆರಿಗೆ ಮಾಡಿಸಲು ವೈದ್ಯರೊಬ್ಬರು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಶಿಶು ಮೃತಪಟ್ಟಿರುವ ಅಮಾನವೀಯ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಭರತ್ ಪುರ್ ಜಿಲ್ಲೆಯಲ್ಲಿ ದುರ್ಘಟನೆ ನಡೆದಿದ್ದು, ಹೆರಿಗೆಗಾಗಿ ಆಸ್ಪತ್ರೆಗೆ ಬಂದ ಮಹಿಳೆಗೆ ವೈದ್ಯರು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆಯನ್ನು ಬೇರೊಂದು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಆಯಂಬುಲೆನ್ಸ್ನಲ್ಲೇ ಅಸುರಕ್ಷಿತ ಹೆರಿಗೆಯಾಗಿ ಮಗು ಮೃತಪಟ್ಟಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜಸ್ಥಾನ ಸರ್ಕಾರ ತನಿಖೆಗೆ ಆದೇಶಿಸಿದೆ.

ಇನ್ನು ಘಟನೆ ಕುರಿತಂತೆ ಮಹಿಳೆಯ ಪತಿ ಇರ್ಫಾನ್ ವಿವರಿಸಿದ್ದು, ‘ತನ್ನ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಸಿಕ್ರಿ ಪ್ರದೇಶದ ಆಸ್ಪತ್ರೆಗೆ ದಾಖಲಿಸಿದೆ. ಹೆರಿಗೆ ಸೌಲಭ್ಯಗಳ ಕೊರತೆ ಇದೆ ಎಂದು ಹೇಳಿ, ಅಲ್ಲಿನ ವೈದ್ಯರು ಜಿಲ್ಲಾಸ್ಪತ್ರೆಗೆ ದಾಖಲಿಸಲು ಹೇಳಿದರು. ಅದರಂತೆ ಆರ್ಬಿಎಂ ಝೆನಾನ ಆಸ್ಪತ್ರೆಗೆ ಹೋದೆವು. ಅಲ್ಲಿನ ವೈದ್ಯೆ ನಮ್ಮ ಮಾಹಿತಿಗಳನ್ನು ಕೇಳಿದ ಬಳಿಕ ಮುಸ್ಲಿಂ ಮಹಿಳೆಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಹೀಗಾಗಿ ಬೇರೆ ಆಸ್ಪತ್ರೆಗೆ ದಾಖಲಿಸಲು ಆಯಂಬುಲೆನ್ಸ್ನಲ್ಲಿ ಹೊರಟೆವು. ಆದರೆ ದಾರಿ ಮಧ್ಯೆ ಪತ್ನಿಗೆ ಅಸುರಕ್ಷಿತ ಹೆರಿಗೆಯಾಗಿ ಮಗು ಮೃತಪಟ್ಟಿತು,’ ಎಂದು ದೂರಿದ್ದಾರೆ.

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ರಾಜಸ್ಥಾನದ ಆರೋಗ್ಯ ಸಚಿವ ಸುಭಾಷ್ ಗರ್ಗ್ ಪ್ರತಿಕ್ರಿಯಿಸಿ ‘ಇದೊಂದು ಅಮಾನವೀಯ ಘಟನೆ. ಸಮಿತಿ ರಚಿಸಿ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

Related