ಭಾರತದಲ್ಲಿ ಕೊರೊನಾಗೆ ಒಂದೇ ದಿನ 49 ಮಂದಿ ಬಲಿ: 1,486 ಜನರಿಗೆ ಸೋಂಕು

ಭಾರತದಲ್ಲಿ ಕೊರೊನಾಗೆ ಒಂದೇ ದಿನ 49 ಮಂದಿ ಬಲಿ: 1,486 ಜನರಿಗೆ ಸೋಂಕು

ನವದೆಹಲಿ: ದೇಶದಲ್ಲಿ 1,486 ಕೊರೊನಾ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಎರಡನೇ ಬಾರಿಗೆ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅಲ್ಲದೇ ಒಂದೇ ದಿನ 49 ಜನರು ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಪ್ರಮಾಣ 652ಕ್ಕೆ ತಲುಪಿದೆ.

ದೇಶದಲ್ಲಿ ಸೋಂಕಿತರ ಪ್ರಮಾಣ 20 ಸಾವಿರದ ಗಡಿ ದಾಟಿದೆ. ಕಳೆದ ಸೋಮವಾರ 1,540 ಜನರಿಗೆ ಒಂದೇ ದಿನ ಸೋಂಕು ತಗುಲಿರುವುದು ದಾಖಲೆಯಾಗಿದೆ. ಮುಖ್ಯವಾಗಿ ವೈರಾಣು ಸೋಂಕಿತ 19.36% ರಷ್ಟು, ಅಂದರೆ ದಿನವೊಂದಕ್ಕೆ 618 ಜನರು ಗುಣಮುಖರಾಗುತ್ತಿದ್ದು ಈ ವರದಿ ಜನರಲ್ಲಿ ಸಮಾಧಾನ ಮೂಡಿದೆ.

ಇದೀಗ ಈ ಸೋಂಕು ದೇಶದ 430 ಜಿಲ್ಲೆಗಳಿಗೆ ಹರಡಿದ್ದು, ಮುಂಬೈ ನಗರದಲ್ಲಿ 3,000, ದೆಹಲಿ( 2081), ಅಹಮದಾಬಾದ್(1298) , ಇಂದೋರ್ (915) ಪ್ರಕರಣಗಳು ದಾಖಲಾಗಿವೆ. ಇನ್ನು ಶೇ. 60ರಷ್ಟು ಸೋಂಕಿತರು ಮಹಾರಾಷ್ಟ್ರ,, ಗುಜರಾತ್, ದೆಹಲಿ, ರಾಜಸ್ಥಾನ, ತಮಿಳುನಾಡು ಈ ಐದು ರಾಜ್ಯಗಳಲ್ಲಿದ್ದಾರೆಂದು ವರದಿ ಹೇಳಿದೆ.

Related