ಭಾರತದಕ್ಕೆ 4ನೇ ಅಲೆಯ ಎಚ್ಚರಿಕೆ, ಆಫ್ರಿಕಾದಲ್ಲಿ 5ನೇ ಅಲೆ ಲಗ್ಗೆ

ಭಾರತದಕ್ಕೆ 4ನೇ ಅಲೆಯ ಎಚ್ಚರಿಕೆ, ಆಫ್ರಿಕಾದಲ್ಲಿ 5ನೇ ಅಲೆ ಲಗ್ಗೆ

ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಇಂದೊಂದು ನಿರ್ಬಂ‍ಧ ಜಾರಿಯಾಗಿದೆ. ತಜ್ಞರು ಜೂನ್ ತಿಂಗಳಲ್ಲಿ 4ನೇ ಅಲೆ ತೀವ್ರತೆ ಕುರಿತು ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆತಂಕ ಎದುರಾಗಿದೆ. ಕಾರಣ ಸೌತ್ ಆಫ್ರಿಕಾದಲ್ಲಿ 5ನೇ ಅಲೆ ಆರಂಭಗೊಂಡಿದೆ. ಇದು ಭಾರತಕ್ಕೂ ಹರಡುವ ಬೀತಿ ಎದುರಾಗಿದೆ.

ಸೌತ್ ಆಫ್ರಿಕಾದಲ್ಲಿ ಆರಂಭವಾದ 3ನೇ ಅಲೆ ಯಾವುದೇ ಪರಿಣಾಮ ಬೀರಲಿಲ್ಲ. ಆದರೆ ಸದ್ಯ ಭಾರತದಲ್ಲೇ 4ನೇ ಅಲೆ ಕಾಣಿಸಿಕೊಂಡಿರುವ ಬೆನ್ನಲ್ಲೆ ಸೌತ್ ಆಫ್ರಿಕಾದ 5ನೇ ಅಲೆ ಪರಿಣಾಮ ಭಾರತದ ಮೇಲೆ ಬಿದ್ದರೆ ಪರಿಸ್ಥಿತಿ ತೀವ್ರತೆ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಸೌತ್ ಆಫ್ರಿಕಾದಲ್ಲಿ ಪ್ರಕರಣ ಸಂಖ್ಯೆ ಹೆಚ್ಚಾಗಿದ್ದು, ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಕೂಡ ಹೆಚ್ಚಾಗಿದೆ ಇದು ಕಳವಳಕಾರಿಯಾಗಿದೆ. ಜನವರಿಯಲ್ಲಿ 4ನೇ ಅಲೆ ಎದುರಿಸಿದ ಸೌತ್ ಆಫ್ರಿಕಾ ಇದೀಗ 5ನೇ ಅಲೆ ಎದುರಿಸಬೇಕಾಗಿದೆ.

ಸೌತ್ ಆಫ್ರಿಕಾ ಆರೋಗ್ಯ ಸಚಿವ ಜೋ ಫಾಲಾ ಈ ಕುರಿತು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಆಸ್ಪತ್ರೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದೆ. ಹೊಸ ಪ್ರಕರಣಗಳಲ್ಲಿ ಸೋಂಕಿತರ ಸಾವಿನ ಪ್ರಮಾಣ ಕಡಿಮೆ ಇದೆ ಅನ್ನೋದೇ ಸಮಾಧಾನ. ಪ್ರತಿಯೊಬ್ಬರು ಮುನ್ನೆಚರಿಕೆ ತೆಗೆದುಕೊಳ್ಳಬೇಕು ಎಂದು  ತಿಳಿಸಿದರು.  ಭಾರತದಲ್ಲಿ ಇದೀಗ 4ನೇ ಅಲೆ ಶುರುವಾಗಿದೆ. ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೋನಾ ಪ್ರಕರಣ ಗಣನೀಯ ಏರಿಕೆಯಾಗಿದೆ.

Related