ಶಾಸಕರಿಗೆ ಇಲ್ವಾ ದಂಡಾ…?

ಶಾಸಕರಿಗೆ ಇಲ್ವಾ ದಂಡಾ…?

ಜೇವರ್ಗಿ  :  ಶಾಸಕ ಅಜಯ್ ಸಿಂಗ್ ಹೆಲ್ಮೆಟ್ ಇಲ್ಲದೆ ವಾಹನ ಚಾಲಾಯಿಸಿ ಸರ್ಕಾರದ ಆದೇಶ ಉಲ್ಲಂಘಿಸಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಿವಲಿಂಗ ಹಳ್ಳಿ ಆರೋಪಿಸಿದ್ದಾರೆ.

ಗ್ರಾಮವಾಸ್ಥವ್ಯ ನೇಪದಲ್ಲಿ ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಆದೇಶ ಉಲ್ಲಂಘಿಸಿದ್ದಾರೆ. ಇಂದು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ತಾಲೂಕಿನ ಜೇರಟಗಿ ಗ್ರಾಮದಲ್ಲಿ ಗ್ರಾಮವಾಸ್ಥವ್ಯ ಹಮ್ಮಿಕೊಂಡಿದ್ದೇ ಒಂದು ರಾಜಕೀಯ ಗಿಮಿಕ್ ಆಗಿದೆ ಎಂದರು.

ಶಾಸಕ ಡಾ. ಅಜಯಸಿಂಗ್ ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿದ್ದಾರೆ. ಪಕ್ಕದಲ್ಲಿದ್ದ ಹಿಂಬಾಲಕರು ಒಂದೇ ಬೈಕ್‌ನಲ್ಲಿ ೩ ಮಂದಿ ಕುಳಿತುಕೊಂಡು ಸವಾರಿ ಮಾಡುತ್ತಿದ್ದಾರೆ, ಒಬ್ಬರೂ ಸಹ ಮುಖಕ್ಕೆ ಮಾಸ್ಕ್ ಧರಿಸಿರಲಿಲ್ಲ.

ಇದೇ ರೀತಿ ಸಾರ್ವಜನಿಕರು ಮಾಡಿದ್ದರೇ ಪೊಲೀಸರು ಪ್ರಶದನೆ ಮೇಲೆ ಪ್ರಶ್ನೆ ಕೇಳಿ, ದಂಡದ ಮೆಲೆ ದಂಡ ಹಾಕಿ ಬೆಂಡ್ ಎತ್ತುತ್ತಾರೆ. ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುತ್ತಿದ್ದ ಪೊಲೀಸ್ ಅಧಿಕಾರಿಗಳು ಶಾಸಕರಿಗೆ ಏಕೆ ತಿಳಿಸಲಿಲ್ಲ..? ಎಂದು ಪ್ರಶ್ನೆ ಮಾಡಿದರು.
ಸರ್ಕಾರದ ಆದೇಶ ಗಾಳಿಗೆ ತೂರಿದ ಶಾಸಕ ಅಜಯಸಿಂಗ್‌ಗೆ ದಂಡ ಹಾಕಬೇಕು ಎಂದು ಆಗ್ರಹಿಸಿದರು.

Related