ನಾನು ಶಾಸಕನಲ್ಲ, ಕ್ಷೇತ್ರದ ಜನರೇ ಶಾಸಕರು: ಬಿಜೆಪಿ ಅಭ್ಯರ್ಥಿ ಎಂ. ಕೃಷ್ಣಪ್ಪ

ನಾನು ಶಾಸಕನಲ್ಲ, ಕ್ಷೇತ್ರದ ಜನರೇ ಶಾಸಕರು: ಬಿಜೆಪಿ ಅಭ್ಯರ್ಥಿ ಎಂ. ಕೃಷ್ಣಪ್ಪ

ಬೆಂಗಳೂರು: ಏನೇ ಅಭಿವೃದ್ಧಿ ಕೆಲಸ ಮಾಡಿದ್ದರೂ ಅದೆಲ್ಲವೂ ಜನರ ಪ್ರೀತಿ ವಿಶ್ವಾಸವೇ ಅದನ್ನು ಮಾಡಿಸಿದೆ ಎಂದು ನಂಬಿದ್ದೇನೆ. ಈ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರ ಋಣಿಯಾಗಿದ್ದೀನಿ. ನಾನು ಶಾಸಕನಲ್ಲ, ಕ್ಷೇತ್ರದ ಜನರೇ ಶಾಸಕರು, ನಾನು ಜನಸೇವಕ ಎಂಬ ತತ್ವ ನನ್ನದು ಎಂದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಎಂ. ಕೃಷ್ಣಪ್ಪ ನುಡಿದರು.

ಇಂದು ನಾಗನಾಥಪುರದಲ್ಲಿ ಮನೆ ಮನೆ ಪ್ರಚಾರಕ್ಕೆ ತೆರಳಿ ಮಾತನಾಡಿದ ಕೃಷ್ಣಪ್ಪರವರು ಬಿಜೆಪಿಗೆ ಮತ ನೀಡಿ ನನ್ನನ್ನು ಆಶೀರ್ವದಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ನಲವತ್ತು ಸಾವಿರ ಮತಗಳ ಅಂತರದಿಂದ ಎಂ.ಕೃಷ್ಣಪ್ಪ ಗೆಲುವು ನಿಶ್ಚಿತ. ಮುಂದೆ ಮಂತ್ರಿಯಾಗುವುದು ಖಚಿತ ಎಂದು ಬಿಬಿಎಂಪಿ ನಿಕಟಪೂರ್ವ ಸದಸ್ಯೆ ಶಾಂತ ವಿ.ಬಾಬು ಭವಿಷ್ಯ ನುಡಿದರು. ಶಾಸಕ ಎಂ.ಕೃಷ್ಣಪ್ಪ ಅವರು ಕಳೆದ 15 ವರ್ಷಗಳಿಂದ ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನರ ಮನಸ್ಸಿನಲ್ಲಿದೆ. ಕ್ಷೇತ್ರದಲ್ಲಿ ರಸ್ತೆ, ಪಾರ್ಕ್, ಕುಡಿಯುವ ನೀರು ಕಾವೇರಿ, ಒಳಚರಂಡಿ, ಕೆರೆ ಅಭಿವೃದ್ಧಿ ಇತ್ಯಾದಿಗಳನ್ನು ಅಭಿವೃದ್ಧಿ ಪಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅದಕ್ಕಾಗಿಯೇ ಕ್ಷೇತ್ರದ ಮತದಾರರು ಉತ್ಸುಕರಾಗಿ ಈ ಬಾರಿ 40 ಸಾವಿರಕ್ಕೂ ಹೆಚ್ಚು ಬಹುಮತಗಳ ಅಂತರದಿಂದ ಗೆಲ್ಲಿಸಲು ಮುಂದಾಗಿದ್ದಾರೆಂದರು.

ಇದೇ ಸಂದರ್ಭದಲ್ಲಿ ಒಬಿಸಿ ಘಟಕದ ಅಧ್ಯಕ್ಷ ಎಸ್.ಮುನಿರಾಜ್ ಮಾತನಾಡಿ ಮುಂದೆ ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ಬಾರಿ ಬಹುಮತದಿಂದ ನಮ್ಮ ಶಾಸಕರು ಗೆಲ್ಲುತ್ತಾರೆ. ಇವರು ಮುಂದೆ ಮಂತ್ರಿಗಳಾಗುವುದನ್ನು ಕ್ಷೇತ್ರದ ಜನತೆ ನೋಡಲು ಉತ್ಸುಕರಾಗಿದ್ದಾರೆ ಎಂದರು.

ಇನ್ನು ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಕೇಶವರಾಜ್ ಗೌಡ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ವಿ.ಬಾಬು, ಮಾಜಿ ಬಿಬಿಎಂಪಿ ಸದಸ್ಯರಾದ ಶ್ರೀನಿವಾಸ್ ರೆಡ್ಡಿ, ಹಿರಿಯ ಮುಖಂಡರಾದ ಶಿವಾರೆಡ್ಡಿ, ಮುನಿಯಪ್ಪ, ನಾಗರಾಜ್, ರಾಜ್ ಬಾಬು, ಗೀತಮ್ಮ ಇನ್ನೂ ಮುಂತಾದವರು ಹಾಜರಿದ್ದರು.

Related