ಹಸಿವು ನೀಗಿಸಲು ಮುಂದಾದ ಮುರುಘಾ ಮಠ

ಹಸಿವು ನೀಗಿಸಲು ಮುಂದಾದ ಮುರುಘಾ ಮಠ

ಚಿತ್ರದುರ್ಗ, ಮಾ. 31 : ಲಾಕ್ಡೌನ್ನಿಂದಾಗಿ ಇಡೀ ದೇಶ ಸ್ತಬ್ಧ. ಕೋಟೆನಾಡು ಚಿತ್ರದುರ್ಗ ಸಂಪೂರ್ಣ ಕರ್ಫ್ಯೂಗೆ ಒಳಗಾಗಿದೆ. ಅಲೆಮಾರಿ ಜನಾಂಗ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಇಲ್ಲಿನ ಚಿತ್ರಹಳ್ಳಿ ಗೇಟ್, ರಾಮಗಿರಿ ಬಳಿ ಅನ್ನಕ್ಕಾಗಿ ನೂರಾರು ಕುಟುಂಬಗಳು ಆಕ್ರಂದಿಸುತ್ತಿವೆ. ದಿನನಿತ್ಯ ದುಡಿದು ತಿನ್ನಬೇಕಾದ ಅನಿವಾರ್ಯತೆ ಇರುವ ಇವರಿಗೆ ಇದೀಗ ಕೆಲಸವೂ ಇಲ್ಲ, ಮನೆಯಿಂದ ಹೊರಗೂ ಬರಲಾರದ ಸ್ಥಿತಿ ಎದುರಾಗಿದೆ. ಪರಿಣಾಮ ಹಸಿವೆಯಿಂದ ಎಲ್ಲಾ ಕುಟುಂಬಗಳು ಮಕ್ಕಳು ಹಾಗೂ ಮಹಿಳೆಯರು ಪರದಾಡುವ ಸ್ಥಿತಿ ಎದುರಾಗಿದೆ. ಚಿತ್ರದುರ್ಗದ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಇದೀಗ ತುತ್ತು ಅನ್ನಕ್ಕೂ ಪದಾಡುತ್ತಿದ್ದ ಹಸಿದ ಜನರಿಗೆ ಅನ್ನ ಹಾಕುವ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ.
ಮಠದಲ್ಲೇ ಸಿದ್ದಪಡಿಸಿದ ಆಹಾರವನ್ನು ಹಸಿದ ಜನರ ಕ್ಯಾಂಪ್ಗಳಿಗೆ ತೆಗೆದುಕೊಂಡು ಹೋಗಿ ಬಡಿಸಲಾಗುತ್ತಿದೆ. ಅಲ್ಲದೆ, ಶುದ್ಧ ಕುಡಿಯುವ ನೀರನ್ನೂ ನೀಡಲಾಗುತ್ತಿದೆ. ಅಲೆಮಾರಿಗಲೂ ಸಹ ಒಬ್ಬೊಬ್ಬರಾಗಿ ಬಂದು ಆಹಾರ ಪಡೆದು ಹಸಿವು ನೀಗಿಸಿಕೊಳ್ಳುತ್ತಿದ್ದಾರೆ ಹಾಗೂ ಮಾನವೀಯತೆಯಿಂದ ಹಸಿವು ನೀಗಿಸಿದ ಮುರುಘಾ ಶ್ರೀಗಳ ಕಾರ್ಯಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ.

Related