ಕಾಂಗ್ರೆಸ್​: ಯುಬಿ ಬಣಕರ್​ಗೆ​ ಭರ್ಜರಿ ಗೆಲುವು​

ಕಾಂಗ್ರೆಸ್​: ಯುಬಿ ಬಣಕರ್​ಗೆ​ ಭರ್ಜರಿ ಗೆಲುವು​

ಹೀರೆಕೆರೂರು: ರಾಜ್ಯದಲ್ಲಿ ಮೇ ಹತ್ತರಂದು 2023 ನೇ ವಿಧಾನಸಭಾ ಚುನಾವಣೆಯ ಮತದಾನ ನಡೆದಿದ್ದು ಇಂದು ಮೇ 13 ಮತದಾನದ ಫಲಿತಾಂಶ ಹೊರ ಬಿದ್ದಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವನ್ನು ಕಂಡಿದೆ.

ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಹೀರೆಕೆರೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​​ ಅಭ್ಯರ್ಥಿ ಯುಬಿ ಬಣಕರ್ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಈ ಹಿಂದೆ ನಡೆದ 2018ರ ಚುನಾವಣೆಯಲ್ಲಿ​ ಕೇವಲ 555 ಮತಗಳಿಂದ ಸೋತಿದ್ದರು. ಜೊತೆಗೆ ಕಳೆದ ಬಾರಿ ಬಿಜೆಪಿಯಲ್ಲಿದ್ದ ಇವರು ಈ ಬಾರಿ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದ್ದರು. ಹೇಗಾದರೂ ಮಾಡಿ ಈ ಬಾರಿ ಗೆಲ್ಲಲೇಬೇಕೆಂದು ಹರಸಾಹಸ ಮಾಡಿದ್ದ ಇವರು ಇದೀಗ ಬಿಜೆಪಿ ಅಭ್ಯರ್ಥಿ ಬಿಸಿ ಪಾಟೀಲ್​ ವಿರುದ್ದ ಗೆಲುವಿನ ನಗೆ ಬಿರಿದ್ದಾರೆ.

 

Related