ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಹೈಕೋರ್ಟ್‌ ನೋಟಿಸ್

ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಹೈಕೋರ್ಟ್‌ ನೋಟಿಸ್

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತರಿಗೆ ಹೈಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.

ಜಯನಗರ ಶಾಪಿಂಗ್ ಕಾಂಪ್ಲೆಕ್ಸ್​ನ ಮೇಲಿನ ನೆಲಮಾಳಿಗೆಯಲ್ಲಿನ ಅಕ್ರಮ ಅಂಗಡಿಗಳನ್ನು ಮೂರು ವರ್ಷದೊಳಗೆ ತೆಗೆದುಹಾಕುವ ಕುರಿತು 2020ರ ಆದೇಶವನ್ನು ಅನುಸರಿಸಲು ವಿಫಲವಾದ ಹಿನ್ನೆಲೆಯಲ್ಲಿ ತುಷಾರ್ ಗಿರಿನಾಥ್ ಅವರಿಗೆ ಹೈಕೋರ್ಟ್‌ ನ್ಯಾಯಾಂಗ ನಿಂದನೆ ನೋಟಿಸ್​ ಜಾರಿಗೊಳಿಸಿದೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಮತ್ತು ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ಅರ್ಜಿ ವಿಚಾರಣೆ ವೇಳೆ ಹಳೆಯ ಪರವಾನಗಿದಾರರಿಗೆ ಸ್ಥಳಾವಕಾಶ ಕಲ್ಪಿಸಲು ಮೇಲಿನ ನೆಲಮಾಳಿಗೆಯನ್ನು ತಾತ್ಕಾಲಿಕವಾಗಿ ಬಳಸಲಾಗುತ್ತಿದೆ ಮತ್ತು ಮೂರು ವರ್ಷಗಳಲ್ಲಿ ಬ್ಲಾಕ್ 2, 3 ಮತ್ತು 4 ಅನ್ನು ನಿರ್ಮಿಸಿದ ನಂತರ ಅದನ್ನು ಪಾರ್ಕಿಂಗ್ ಸ್ಥಳವಾಗಿ ಬಳಸಲಾಗುವುದು ಎಂದು ಬಿಬಿಎಂಪಿ ಹೈಕೋರ್ಟ್ ಗೆ ತಿಳಿಸಿತ್ತು. ಆದರೆ ಇತರ ಬ್ಲಾಕ್‌ಗಳನ್ನು ನಿರ್ಮಿಸಲು ಮತ್ತು ಮೇಲಿನ ಬೇಸ್‌ಮೆಂಟ್‌ನ ಪಾರ್ಕಿಂಗ್ ಫ್ಲೋರ್‌ನಿಂದ ಅಕ್ರಮ ಅಂಗಡಿಗಳನ್ನು ತೆಗೆದುಹಾಕಲು ಬಿಬಿಎಂಪಿ ವಿಫಲವಾಗಿದೆ ಎಂದು ಆರೋಪಿಸಿದ ಅರ್ಜಿದಾರರಾದ ಆರ್.ಆರ್.ಹಿರೇಮಠ್ ಪರ, ವಕೀಲರಾದ ಜಿ.ಆರ್.ಮೋಹನ್, ಹೈಕೋರ್ಟ್ ಆದೇಶ ಪಾಲಿಸದ ಬಿಬಿಎಂಪಿ ನ್ಯಾಯಾಂಗ ನಿಂದನೆ ಎಸಗಿದೆ. ಹಾಗಾಗಿ ಪಾಲಿಕೆ ವಿರುದ್ಧ ನ್ಯಾಯಾಂಗ ನಿಂದನೆಯಡಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

 

Related