ನಿಮ್ಮ ಮುದ್ದಾದ ನಾಯಿಯ ಆರೈಕೆ ಹೀಗೆ ಮಾಡಿ!

ನಿಮ್ಮ ಮುದ್ದಾದ ನಾಯಿಯ ಆರೈಕೆ ಹೀಗೆ ಮಾಡಿ!

ಮನುಷ್ಯರು ಹಾಗೂ ಪ್ರಾಣಿಗಳ ಸಂಬಂಧ ಅತ್ಯಂತ ಅಮೂಲ್ಯವಾದದ್ದು ಅದರಲ್ಲಿಯೂ ಸಹ ಮನುಷ್ಯರಿಗೆ ನಾಯಿ ಎಂದರೆ ಬಹಳ ಇಷ್ಟಪಡುತ್ತಾರೆ. ಹಾಗೂ ಅವರ ಮನೆಯವರೇ ಎಂದು ನೋಡಿಕೊಳ್ಳುತ್ತಾರೆ ಅವರಿಗೆ ಏನಾದರೂ ಸಹ ಅವರು ತಡೆದುಕೊಳ್ಳುತ್ತಾರೆ, ಆದರೆ ಅವರು ಪ್ರೀತಿಸುವ ಮುದ್ದಾದ ನಾಯಿಗೆ ಏನಾದರೂ ಆದರೆ ಅದನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಮನುಷ್ಯರು ಅತಿ ಹೆಚ್ಚು ಪ್ರೀತಿಸುವುದೆಂದರೆ ಅದು ಶ್ವಾನ ಆಗಿರುತ್ತದೆ. ಅದೇ ತರಹ ಶ್ವಾನವು ಸಹ ನಮ್ಮನ್ನು ಪ್ರೀತಿಸುತ್ತದೆ.

ಬಿಸಿಲಿಲ್ಲದ ಈ ತಂಪಾದ ವಾತಾವರಣದಲ್ಲಿ ಅನೇಕ ಮಂದಿ ತಮ್ಮ ನೆಚ್ಚಿನ ಸಾಕುಪ್ರಾಣಿಯೊಂದಿಗೆ ವಾಕಿಂಗ್ ಹೋಗುತ್ತಾರೆ. ಆದರೆ ಸಾಕುಪ್ರಾಣಿಗಳ ದೇಹದಲ್ಲಿ ರೋಗಾಣುಗಳ ದಾಳಿ ಹೆಚ್ಚಾಗಬಹುದು.

ಮಳೆ ನೀರು ಅವುಗಳ ಮೇಲೆ ಬಿದ್ದರೆ ಸಾಕು ಪ್ರಾಣಿಗಳ ದೇಹ ಒದ್ದೆಯಾಗುತ್ತದೆ. ಇದರಿಂದ ಚರ್ಮದ ಸಮಸ್ಯೆಗಳು ಉಂಟಾಗುತ್ತದೆ. ಹಾಗಾಗಿ ಮಳೆಯಲ್ಲಿ ಶ್ವಾನ ಒದ್ದೆಯಾದರೆ ಒಣ ಟವೆಲ್ ನಿಂದ ಒರೆಸಿ.

ನಿಂತಿರುವ ನೀರು ಅಥವಾ ಒದ್ದೆಯಾದ ಸ್ಥಳಗಳು ಬ್ಯಾಕ್ಟೀರಿಯಾದ ಸಂತಾನೋತ್ಪತ್ತಿಗೆ ಆಧಾರವಾಗಿದೆ. ಆದ್ದರಿಂದ ನಿಮ್ಮ ಸಾಕುಪ್ರಾಣಿಗಳು ಅಂತಹ ಸ್ಥಳಗಳಿಗೆ ಹೋಗದಂತೆ ನೋಡಿಕೊಳ್ಳಿ.

ಸೊಳ್ಳೆ ಮತ್ತು ಕೀಟಗಳು ಎರಡು ವಿಧದ ಹಾನಿಕಾರಕ ಪರಾವಲಂಬಿಗಳನ್ನು ಆಶ್ರಯಿಸುತ್ತವೆ. ವಿವಿಧ ರೀತಿಯ ಹಾನಿಕಾರಕ ಪರಾವಲಂಬಿಗಳು ಮಳೆಗಾಲದಲ್ಲಿ ಸಾಕುಪ್ರಾಣಿಗಳಲ್ಲಿ ಗೂಡುಕಟ್ಟುತ್ತವೆ. ನಾಯಿಗಳು ಮತ್ತು ಬೆಕ್ಕುಗಳಿಗೂ ಸಹ ಚರ್ಮದ ದದ್ದುಗಳು ಉಂಟಾಗಬಹುದು.

ಮಳೆಗಾಲದಲ್ಲಿ ಕೀಟಗಳ ಬಾಧೆ ಹೆಚ್ಚಾಗುತ್ತದೆ. ಹೀಗಾಗಿ ಕೀಟನಾಶಕಗಳ ಬಳಕೆ ಹೆಚ್ಚುತ್ತಿದೆ. ಈ ಹಾನಿಕಾರಕ ಪ್ರದೇಶಗಳಿಂದ ಸಾಕುಪ್ರಾಣಿಗಳನ್ನು ದೂರವಿಡಿ.

ಮಳೆಗಾಲದಲ್ಲಿ ಶ್ವಾನಕ್ಕೆ ಆರೋಗ್ಯಕರ ಆಹಾರವನ್ನು ನೀಡುವುದು ಸಹ ಮುಖ್ಯವಾಗಿದೆ. ಉತ್ತಮ ಪೌಷ್ಟಿಕಾಂಶವುಳ್ಳ ಆಹಾರವು ದೇಹವನ್ನು ಆರೋಗ್ಯವಾಗಿಡುತ್ತದೆ. ರೋಗಕಾರಕಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

 

Related