ಕಿಡ್ನಿ ವೈಪಲ್ಯಕ್ಕೆ ತುತ್ತಾದ ಕಂದಮ್ಮನ ಜೀವಕ್ಕೆ ನೆರವಾಗಿ

ಕಿಡ್ನಿ ವೈಪಲ್ಯಕ್ಕೆ ತುತ್ತಾದ ಕಂದಮ್ಮನ ಜೀವಕ್ಕೆ ನೆರವಾಗಿ

ಗುರಮಠಕಲ್ : ಕಳೆದ ವರ್ಷವಷ್ಟೇ ಮಗನನ್ನು ಕಳೆದುಕೊಂಡ ಬಡ ಕುಟುಂಬದಲ್ಲಿ ಇದೀಗ ಮಗಳು ಜೀವನ್ ಮರಣದ ನಡುವೆ ಹೋರಾಡುತ್ತಿದ್ದು, ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ.

ಕೆಲ ವರ್ಷಗಳಿಂದ ಗುರುಮಠಕಲ್‌ನಲ್ಲಿ ಜೀವನೋಪಾಯಕ್ಕಾಗಿ ಉಪಹಾರ, ಫಾಸ್ಟ್ಫುಡ್ ಹೋಟೆಲ್ ನಡೆಸುತ್ತ ಜೀವನ ಸಾಗಿಸುತ್ತಿದ್ದ ನರಸಿಂಹ ಪದ್ಮಾ ದಂಪತಿಯ 6 ವರ್ಷದ ಮಗಳು ಅಕ್ಷರಾ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಲೀವರ್ ಕಸಿ ಮಾಡಬೇಕಿದ್ದು, ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ 25 ಲಕ್ಷ ರೂ. ಖರ್ಚಾಗಲಿದೆ ಎಂದು ಹೇಳಲಾಗುತ್ತದೆ ಸಹಾಯದ ನೀರಿಕ್ಷೆಯಲ್ಲಿ ಅಕ್ಷರಾಳ ಕುಟುಂಬ ಇದೆ.

ಈ ದಂಪತಿಯ ಮೂವರು ಮಕ್ಕಳಲ್ಲಿ ಕಳೆದ ವರ್ಷವಷ್ಟೇ 3 ವರ್ಷದ ಮಗನೊಬ್ಬ ಹೃದಯದಲ್ಲಿ ರಂಧ್ರದ ಸಮಸ್ಯೆಯಿಂದ ಜೀವ ಕಳೆದುಕೊಂಡಿದ್ದಾನೆ. ಈ ಘಟನೆ ಮರೆಯುವ ಮುನ್ನವೇ ಮತೊಂದು ಆಘಾತ ಎದುರಾಗಿದೆ.

ಸದ್ಯ ಬೆಂಗಳೂರಿನ ಇಂದಿರಾಗಾಂಧಿ ಇನ್ಸ್ಟಿಟ್ಯೂಟ್ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಾಲಕಿ ವಿಲ್ಸನ್ ಡಿಸೀಸ್ ಎನ್ನುವ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಹೊಟ್ಟೆಯಲ್ಲಿ ನೀರು ತುಂಬುತ್ತಿರುವುದರಿಂದ ಲೀವರ್ ಬದಲಾವಣೆ ಅನಿವಾರ್ಯ ಎಂದು ವೈದ್ಯರು ಹೇಳಿದ್ದಾರೆ.

ಆರ್ಥಿಕ ಸಹಾಯಕ್ಕೆ ಬಾಲಕಿ ಕುಟುಂಬ ದಾನಿಗಳ ಸಹಾಯಹಸ್ತಕ್ಕೆ ಮನವಿ ಮಾಡಿದ್ದಾರೆ.
ಗೋಗಲ್ ಪೇ – 7829327746, ಪೋನ್ ಪೇ -9573330537 ಸಂಖ್ಯೆಗೆ ದಾನಿಗಳಿಂದ ನೆರವು ನೀಡಬಹುದಾಗಿದೆ. ಜೀವ ಎಲ್ಲರಿಗೂ ಒಂದೇ ಆ ನೋಂದ ಜೀವದ ಕುಟುಂಬದ ಜೊತೆ ನಿಲ್ಲೋಣ ಇದು ಪ್ರಜಾವಾಹಿನಿಯ ಕಳಕಳಿಯ ಮನವಿ.

Related