ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸು ಆರೋಗ್ಯಕರ ಸೂಪ್

ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸು ಆರೋಗ್ಯಕರ ಸೂಪ್

ಸಾಮಾನ್ಯವಾಗಿ ಮಳೆಗಾಲ ಬಂದೆಂದರೆ ಎಲ್ಲರೂ ಮಳೆ ಬರುವ ಸಮಯದಲ್ಲಿ ಬಿಸಿ ಬಿಸಿಯಾದ ತಿಂಡಿ ತಿನಿಸುಗಳನ್ನು ತಿನ್ನಬೇಕೆಂದು ಬಯಸುತ್ತಾರೆ.

ಆದರೆ ಮಳೆಗಾಲದಲ್ಲಿ ಬೀದಿ ಬದಿಯ ಸಿಗುವ ಆಹಾರಗಳನ್ನು ತಿನ್ನಲು ಕಡಿಮೆ ಮಾಡಿ ಮನೆಯಲ್ಲಿ ಮಾಡುವಂತ ಆಹಾರಗಳನ್ನು ಅತಿ ಹೆಚ್ಚಾಗಿ ತಿನ್ನಬೇಕು.

ಶುಂಠಿ ಮತ್ತು ಕ್ಯಾರೆಟ್ ಸೂಪ್: ಎಲ್ಲರ ಮನೆಯಲ್ಲಿ ಸಿಗುವಂತಹ ಶುಂಠಿ ಮತ್ತು ಕ್ಯಾರೆಟ್ ಬಳಸಿ ಸೂಪ್ ಮಾಡಿ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಜೊತೆಗೆ ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಕ್ಯಾರೆಟ್ ಗಮನಾರ್ಹ ಪ್ರಮಾಣದ ಆಹಾರದ ಫೈಬರ್ ನ್ನು ಹೊಂದಿದ್ದು, ಅದು ಉತ್ತಮ ಜೀರ್ಣಕಾರಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಮಿಶ್ರ ತರಕಾರಿ ಸೂಪ್: ಮಿಶ್ರ ತರಕಾರಿ ಸೂಪ್ ಆರೋಗ್ಯಕರವಾಗಿದ್ದು, ಎಲ್ಲಾ ಋತುಮಾನಗಳಲ್ಲಿಯೂ ಸೇವಿಸಲು ಇದು ಸೂಕ್ತವಾಗಿದೆ. ಹಲವಾರು ಆರೋಗ್ಯಕರ ತರಕಾರಿಗಳ ಮಿಶ್ರಣದ ಈ ಸೂಪ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕ್ಯಾರೆಟ್, ಬೀನ್ಸ್, ಟೊಮೆಟೊ, ಬಟಾಣಿ ಮುಂತಾದ ತರಕಾರಿಗಳನ್ನು ಸೇರಿಸಿ ಸೂಪ್ ತಯಾರಿಸಬಹುದು.

ನುಗ್ಗೆ ಸೊಪ್ಪು ಸೂಪ್: ನುಗ್ಗೆ ಸೊಪ್ಪು ಕ್ಯಾಲ್ಸಿಯಂ, ವಿಟಮಿನ್ ಸಿ, ಕಬ್ಬಿಣ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಅಲ್ಲದೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ರಸಂ: ರಸಂ ನ್ನು ಸಾಮಾನ್ಯವಾಗಿ ಸಾಕಷ್ಟು ಕರಿ ಮೆಣಸ್ನು ಸೇರಿಸಿ ತಯಾರಿಸಲಾಗುತ್ತದೆ. ಕರಿಮೆಣಸು ವಿಟಮಿನ್ ಬಿ ಮತ್ತು ಕ್ಯಾಲ್ಸಿಯಂ ನಿಂದ ಸಮೃದ್ಧವಾಗಿದೆ. ಜೊತೆಗೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ಅಲ್ಲದೆ ರಸಂ ಗೆ ಸೇರಿಸಲಾಗುವ ಅರಶಿನ, ಟೊಮೆಟೊ, ಸಾಸಿವೆ, ಕೊತ್ತಂಬರಿ, ಬೆಳ್ಳುಳ್ಳಿ, ಕರಿಬೇವು ಹಾಗೂ ಇನ್ನಿತರ ಮಸಾಲೆ ಪದಾರ್ಥಗಳು ಸಾಮಾನ್ಯ ಜ್ವರ, ಶೀತ, ಗಂಟಲು ನೋವಿನಂತಹ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತವೆ.

Related