ಈ ಆಹಾರ ಸೇವನೆಯಿಂದ ಕೊಲೆಸ್ಟ್ರಾಲ್ ಉತ್ಪತ್ತಿ, ಹೃದಯಾಘಾತ ಸಾಧ್ಯತೆ

ದೇಹಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆ ಹೆಚ್ಚಿಸಲು ನೇರವಾಗಿ ಕಾರಣವಾಗುತ್ತದೆ. ಅಧಿಕ ಅಥವಾ ಕೆಟ್ಟ ಕೊಲೆಸ್ಟ್ರಾಲ್  ಒಂದು ರೋಗವಾಗಿದೆ. ಅದು ನಮ್ಮ ಆಹಾರ ಕ್ರಮಕ್ಕೆ ನೇರವಾಗಿ ಸಂಬಂಧ ಪಟ್ಟಿದೆ. ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟವು ಹೃದ್ರೋಗ ಮತ್ತು ಪರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.

WHO ಪ್ರಕಾರ ಪರಿಧಮನಿಯ ಕಾಯಿಲೆಯು ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಹೆಚ್ಚಿ ಕೊಲೆಸ್ಟ್ರಾಲ್ ನಿಂದ ಉಂಟಾಗುತ್ತದೆ ಎಂದು ಹೇಳುತ್ತದೆ.

ಕೆಂಪು ಆಂಶವನ್ನು ಯಾವಾಗಲೂ ಕೊಲೆಸ್ಟ್ರಾಲ್ ಗೆ ಕೆಟ್ಟದ್ದು ಎಂದು ಪರಿಗಣಿಸಲಾಗಿದೆ. ಕೆಂಪು ಮಾಂಸದಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೆಚ್ಚು ಇರುತ್ತದೆ. ಹಾರ್ವರ್ಡ್ ವೈದ್ಯಕೀಯ ಶಾಲೆಯ ತಜ್ಞರ ಪ್ರಕಾರ, ಅಧಿಕ ಕೊಲೆಸ್ಟ್ರಾಲ್ ಹೊಂದಿರುವ ಜನರು ಕೆಂಪು ಮಾಂಸವನ್ನು ತ್ಯಜಿಸಬೇಕು.

ಕೆಲವೊಮ್ಮೆ ಕೆಂಪು ಮಾಂಸವನ್ನು ಬಹಳ ಸೀಮಿತ ಪ್ರಮಾಣದಲ್ಲಿ ಸೇವಿಸಬಹುದು. ನೀವು ಕೆಂಪು ಮಾಂಸವನ್ನು ಕಡಿಮೆ ಸ್ಯಾಚುರೇಟೆಡ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಹೊಂದಿರುವ ಪ್ರೋಟೀನ್ ನೊಂದಿಗೆ ಬದಲಾಯಿಸಿದರೆ ಅದು ಉತ್ತಮ ಪಲಿತಾಂಶ ನೀಡುತ್ತದೆ. ಆಹಾರದ ಜೊತೆಗೆ ನಿಮ್ಮ ದೈಹಿಕ ಚಟುವಟಿಕೆ ಹೆಚ್ಚಿರಬೇಕು. ದಿನವೂ ಕಾಲೋಚಿತ ಹಣ್ಣುಗಳು ಮತ್ತು ತರಕಾರಿ ಸೇವನೆ ಮಾಡಿ. ಒಳಗಿನಿಂದ ಆರೋಗ್ಯವನ್ನು ಬಲಪಡಿಸಲು ಆಹಾರದಲ್ಲಿ ಸಾಕಷ್ಟು ಉತ್ಕರ್ಷಣ ನಿರೋಧಕ ಪದಾರ್ಥ ಸೇರಿಸಿ. ನಿಯಮಿತವಾಗಿ ಆರೋಗ್ಯ ತಪಾಸಣೆ ಮತ್ತು ವಾಕಿಂಗ್ ಮಾಡುತ್ತ ಇರಿ.

Related