ದಾಸವಾಳ ಜ್ಯೂಸ್ ನಲ್ಲಿದೆ ಆರೋಗ್ಯಕರ ಪ್ರಯೋಜನಗಳು!

ದಾಸವಾಳ ಜ್ಯೂಸ್ ನಲ್ಲಿದೆ ಆರೋಗ್ಯಕರ ಪ್ರಯೋಜನಗಳು!

ಈಗಿನ ಜನರೇಶನ್ ನಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ ಯಾಕೆಂದರೆ, ಹೆಚ್ಚು ಕೆಲಸದ ಒತ್ತಡ ಮತ್ತು ಇನ್ನಿತರ ಒತ್ತಡಗಳಲ್ಲಿ ಸಿಲುಕಿ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಫಲರಾಗುತ್ತೇವೆ.

ಇನ್ನು ನಮ್ಮ ಆರೋಗ್ಯ ಹದಗೆಟ್ಟಾಗ, ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಮಿಕಲ್ ಮಿಶ್ರಿತವಾಗಿರುವಂತಹ ಔಷಧಿಗಳನ್ನು ನಾವು ಸೇವನೆ ಮಾಡುತ್ತೇವೆ ಇದರಿಂದ ಅಡ್ಡ ಪರಿಣಾಮಗಳಾಗುವುದುಂಟು

ಹೌದು ಕೆಮಿಕಲ್ ಮಿಶ್ರಿತ ಔಷಧಿಗಳನ್ನು ಉಪಯೋಗಿಸುವ ಬದಲು ಮನೆಯಲ್ಲಿ ತಯಾರು ಮಾಡುವಂತಹ ದಾಸವಾಳ ಜ್ಯೂಸ್ ಮಾಡಿ ಕುಡಿಯುವುದರಿಂದ ನಮ್ಮ ಆರೋಗ್ಯದ ಹಲವಾರು ಪ್ರಯೋಜನಗಳನ್ನು ಕಂಡುಕೊಳ್ಳಬಹುದು.

ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ ದಾಸವಾಳ ಜ್ಯೂಸ್ ಒಳ್ಳೆಯದು. ಇದನ್ನು ಸೇವಿಸಿದರೆ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಾಯಕವಾಗುತ್ತದೆ. ಬೊಜ್ಜು ನಿವಾರಕ ಗುಣ ಕೂಡ ಹೊಂದಿದ್ದು, ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಹೀಗಾಗಿ ಹೃದಯದ ಆರೋಗ್ಯ ವೃದ್ಧಿಯಾಗುತ್ತದೆ.

ಕೆಮ್ಮುಶೀತ ನಿವಾರಿಸುತ್ತೆ

ಕೆಲವರಿಗೆ ಬೇಸಿಗೆಯಲ್ಲಿ ಕೆಮ್ಮು-ಶೀತ ಆಗೋದು ಸಾಮಾನ್ಯ. ಆದರೆ ಈ ಸಮಸ್ಯೆಯನ್ನು ನಿವಾರಿಸುವ ಸಾಮಾಥ್ರ್ಯ ದಾಸವಾಳ ಜ್ಯೂಸ್‍ನಲ್ಲಿದೆ. ಈ ಜ್ಯೂಸ್‍ನಲ್ಲಿ ದಾಸವಾಳ ಹೂ ಹಾಗೂ ನಿಂಬೆರಸ ಇರುವುದರಿಂದ ದೇಹಕ್ಕೆ ವಿಟಮಿನ್ ಸಿ ಅಂಶ ಹೆಚ್ಚು ದೊರೆಯುತ್ತದೆ.

ಬಿಪಿ ಕಡಿಮೆ ಮಾಡುತ್ತದೆ

ಅಧಿಕ ರಕ್ತದೊತ್ತಡ ಇರುವವರು ದಾಸವಾಳ ಜ್ಯೂಸ್ ಕುಡಿದರೆ ಒಳ್ಳೆದು. ಇದು ಬಿಪಿ ಹಾಗೂ ಸಂಧಿವಾತ ನೋವು ಕಡಿಮೆಯಾಗುತ್ತದೆ. ದಾಸವಾಳ ಆ್ಯಂಟಿಆಕ್ಸಿಡೆಂಟ್ ಅಂಶವಿದ್ದು, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದರಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಶೂನ್ಯವಾಗಿರುವುದರಿಂದ ಬೊಜ್ಜನ್ನು ಕರಗಿಸುತ್ತದೆ, ದೇಹದ ಆರೋಗ್ಯ ಕಾಪಾಡುತ್ತದೆ.

ದೇಹದ ಉಷ್ಣತೆ ಕಡಿಮೆ ಮಾಡುತ್ತದೆ

ಬೇಸಿಗೆಯಲ್ಲಿ ದೇಹದ ಉಷ್ಣತೆ ಕಾಪಾಡುವಲ್ಲಿ ದಾಸವಾಳ ಜ್ಯೂಸ್ ಸಹಕಾರಿ. ಇದು ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ. ಅದರಲ್ಲೂ ಬಿಳಿ ಬಣ್ಣದ ದಾಸವಾಳ ಹೂ ಜ್ಯೂಸ್ ಕಣ್ಣುಗಳಿಗೆ ತಂಪು ನೀಡುತ್ತದೆ.

ಕೂದಲಿನ ಆರೋಗ್ಯಕ್ಕೆ ಉತ್ತಮ

ದಾಸವಾಳದ ಹೂ ಹಾಗೂ ಎಲೆ ಕೂದಲನ್ನು ಬಾಹ್ಯವಾಗಿ ಆರೈಕೆ ಮಾಡುವಲ್ಲಿ ತುಂಬಾ ಪ್ರಯೋಜನಕಾರಿ. ಅದರಲ್ಲೂ ದಾಸವಾಳ ಜ್ಯೂಸ್ ಕುಡಿದರೆ ಆಂತರಿಕವಾಗಿ ಕೂಡ ಕೂದಲಿಗೆ ಪೋಷಣೆ ನೀಡುತ್ತದೆ. ಕೂದಲಿಗೆ ಅಗ್ಯತವಾದ ವಿಟಮಿನ್‍ಗಳನ್ನು ಈ ಜ್ಯೂಸ್ ಒದಗಿಸುತ್ತದೆ.

 

ದಾಸವಾಳ ಜ್ಯೂಸ್ ಮಾಡುವ ವಿಧಾನ

ಮೊದಲು 1/4 ಲೀಟರ್ ನೀರನ್ನು ಕುದಿಯಲು ಪಾತ್ರೆಯಲ್ಲಿ ಹಾಕಿ. ನೀರು ಕುದಿಯಲು ಆರಂಭಿಸಿದಾಗ ಅದಕ್ಕೆ ಸಕ್ಕರೆ ಹಾಕಿ. ಸಕ್ಕರೆ ಕರಗಿದ ನಂತರ ಗ್ಯಾಸ್ ಆಫ್ ಮಾಡಿ, ಅದಕ್ಕೆ ದಾಸವಾಳದ ಹೂಗಳ ಎಸಳನ್ನು ಹಾಕಿ (ದಾಸಾವಾಳದ ಹೂ ಹಾಕಿದ ಮೇಲೆ ನೀರನ್ನು ಕುದಿಸಬೇಡಿ), ನೀರು ತಣ್ಣಗಾದ ಮೇಲೆ ಅದನ್ನು ಸೋಸಿ ಅದಕ್ಕೆ ನಿಂಬೆ ರಸ ಸೇರಿಸಿ ಕಲಿಸಿ. ಈ ಮಿಶ್ರಣ 2 ತಿಂಗಳವರೆಗೆ ಚೆನ್ನಾಗಿರುತ್ತದೆ. ಬೇಕಾದಾಗ ಅರ್ಧ ಲೋಟ ಜ್ಯೂಸ್‍ಗೆ ಅರ್ಧ ಲೋಟ ನೀರು ಬಳಸಿ ಮಿಕ್ಸ್ ಮಾಡಿ ಕುಡಿಯಬಹುದು.

ಬೇಕಾಗಿರುವ ಸಾಮಗ್ರಿ

* ದಾಸಾವಾಳದ ಹೂ 20-25

* ನೀರು 1/4 ಲೀಟರ್

* ನಿಂಬೆ ಹಣ್ಣು 5-6

* ಸಕ್ಕರೆ 250ಗ್ರಾಂ

 

Related