ವಿದ್ಯುತ್ ಕಳ್ಳತನ ಎಚ್‍ಡಿಕೆಗೆ ಬಿತ್ತು ಭಾರಿ ದಂಡ!?

ವಿದ್ಯುತ್ ಕಳ್ಳತನ ಎಚ್‍ಡಿಕೆಗೆ ಬಿತ್ತು ಭಾರಿ ದಂಡ!?

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ದೀಪಾವಳಿ ಹಬ್ಬದ ಪ್ರಯುಕ್ತ ಅವರ ಮನೆಯ ಅಲಂಕಾರಕ್ಕಾಗಿ ಕರೆಂಟ್ ಕಳ್ಳತನ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಅಧಿಕಾರಿಗಳು ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಬಿಗ್ ಶಾಕ್ ನೀಡಿದ್ದಾರೆ.

ಹೌದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ದೀಪಾಲಂಕಾರಕ್ಕಾಗಿ ಕರೆಂಟ್ ಕಳ್ಳತ ಆರೋಪಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಅಧಿಕಾರಿಗಳು ಎಚ್ ಡಿ ಕುಮಾರಸ್ವಾಮಿ ಅವರಿಗೆ ದಂಡ ವಿಧಿಸಿದ್ದಾರೆ.

ಬೆಸ್ಕಾಂ ಜಾಗೃತಾ ದಳದ ಡಿವೈಎಸ್ ಪಿ ಅನುಷ ನೇತೃತ್ವದಲ್ಲಿ ವಿದ್ಯುತ್ ಬಳಕೆ ಕೌಂಟಿಂಗ್ ಮಾಡಿ, 10 ನಿಮಿಷಕ್ಕೆ​ ಎಷ್ಟು ವಿದ್ಯುತ್ ಬಳಕೆ ಆಗುತ್ತದೆ ಎನ್ನುವುದನ್ನು ಲೆಕ್ಕ ಮಾಡಿದ್ದರು. ಇದರಿಂದ ಎರಡು ದಿನ ಎಷ್ಟು ಬಳಕೆ ಆಗಿದೆ ಎಂಬುದರ ಲೆಕ್ಕ ತೆಗೆದು, ನ.14 ರಂದು ಅಧಿಕಾರಿಗಳು ರಿಪೋರ್ಟ್ ನೀಡಿದ್ದರು. ಇದೀಗ ಬೆಸ್ಕಾಂ ಇಲಾಖೆ ಬರೊಬ್ಬರಿ 68 ಸಾವಿರ ದಂಡವನ್ನು ವಿಧಿಸಿದ್ದು, ಅದನ್ನು ಏಳು ದಿನಗಳೊಳಗಾಗಿ ಕಟ್ಟುವಂತೆ ಸೂಚಿಸಿದೆ.

Related