61ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಹ್ಯಾಟ್ರಿಕ್ ಹೀರೋ

61ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಹ್ಯಾಟ್ರಿಕ್ ಹೀರೋ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿರುವ ದೊಡ್ಮನೆ ಹುಡುಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಇಂದು ಅಭಿಮಾನಿಗಳು 61ನೆಯ ಹುಟ್ಟು ಹಬ್ಬದ ಶುಭಾಶಯಗಳು ಕೋರಿದ್ದಾರೆ.

ಶಿವರಾಜ್​ಕುಮಾರ್ ಅವರು ಇಂದು 61ನೆಯ ಅದ್ದೂರಿಯಾಗಿ ಬರ್ತ್​​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಮಂಗಳವಾರ ತಡರಾತ್ರಿಯೇ ಅಭಿಮಾನಿಗಳು ಶಿವಣ್ಣನ ಮನೆ ಎದುರು ನೆರೆದಿದ್ದರು. ಮಧ್ಯರಾತ್ರಿ ಶಿವರಾಜ್​ಕುಮಾರ್ ಅವರು ಕೇಕ್ ಕತ್ತರಿಸಿದರು. ಈ ವೇಳೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಕಳೆದ 3 ವರ್ಷಗಳಿಂದ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸದಿದ್ದ ಶಿವಣ್ಣ ಈ ಬಾರಿ ಮಾತ್ರ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ತಿಂದು ಹಂಚಿ ಸಂಭ್ರಮಪಟ್ಟಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ಅಭಿಮಾನಿಗಳು ಮಾನ್ಯತಾ ಟೆಕ್​ ಪಾರ್ಕ್​ ಬಳಿ ಇರುವ ಶಿವರಾಜ್​ ಕುಮಾರ್​ ಮನೆ ಬಳಿ ಜಮಾಯಿಸಿದ್ದರು.

ಶಿವರಾಜ್​ ಕುಮಾರ್​ ಕೈಯಲ್ಲಿ ಕೇಕ್​ ಕಟ್​ ಮಾಡಿಸಿ, ಶಿವಣ್ಣ ಮನೆ ಸುತ್ತ ಸ್ಕೈಶಾಟ್ಸ್ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.

Related