ಬಿಗ್ ಬಿ ಗೆ 81 ವರ್ಷದ ಹುಟ್ಟುಹಬ್ಬದ ಸಂಭ್ರಮ

ಬಿಗ್ ಬಿ ಗೆ 81 ವರ್ಷದ ಹುಟ್ಟುಹಬ್ಬದ ಸಂಭ್ರಮ

ಮುಂಬೈ: ಬಾಲಿವುಡ್ ನ ಬಿಗ್ ಬಿ ಎಂದೇ ಖ್ಯಾತಿಯನ್ನು ಹೊಂದಿರುವ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ಇಂದು ತಮ್ಮ 81ನೆಯ ವಸಂತಕ್ಕೆ ಕಾಲಿಡುವ ಮೂಲಕ ತಮ್ಮ ನಿವಾಸದಲ್ಲಿ ಬರ್ತಡೇ ಸೆಲೆಬ್ರೇಶನ್ ಮಾಡಿಕೊಂಡಿದ್ದಾರೆ.

ಹಿಂದಿ ಭಾಷೆ ಮಾತ್ರವಲ್ಲದೆ ಇನ್ನು ಕನ್ನಡ, ತೆಲುಗು, ತಮಿಳು ಇನ್ನೂ ಹಲವಾರು ಭಾಷೆಗಳಲ್ಲಿ ನಟಿಸಿ ಸೈನಿಸಿಕೊಂಡಿರುವ ಹಿರಿಯ ನಟ ಅಮಿತಬ್, ಅವರ 81 ವಯಸ್ಸಿನಲ್ಲೂ 18 ವರ್ಷದ ಹುಡುಗನ ರೀತಿ ನಟನೆ ಮಾಡುತ್ತಾರೆ.

ಅಮಿತಾಬ್ ಬಚ್ಚನ್ ಹೆಸರು ಹೇಳದೆ ಭಾರತೀಯ ಚಿತ್ರರಂಗದ ಬಗ್ಗೆ ಮಾತಾಡಲು ಸಾಧ್ಯವಿಲ್ಲ. ಬಾಲಿವುಡ್ ನಲ್ಲಿ ಟ್ರೆಂಡ್ ಹುಟ್ಟು ಹಾಕಿರುವ ಅಮಿತಾಬ್ ಪಟ್ಟಿಯಲ್ಲಿ ಲೆಕ್ಕವಿಲ್ಲದಷ್ಟು ಸೂಪರ್ ಹಿಟ್ ಸಿನಿಮಾಗಳಿವೆ.

ನೂರಾರು ಪಾತ್ರಗಳ ಮೂಲಕ ಅಮಿತಾಬ್ ಬಚ್ಚನ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅವರ ಎತ್ತರ, ಧ್ವನಿ, ನಟನೆಯನ್ನು ಮೀರಿಸುವವರಿಲ್ಲ. 1969 ರಲ್ಲಿ ಮೃಣಾಲ್ ಸೇನ್ ಅವರ ಭುವನ್ ಶೋಮ್ ನಲ್ಲಿ ಮೂಲಕ ಬಣ್ಣ ಹಚ್ಚಿದ್ರು. ಹಿಂದೂಸ್ತಾನಿ ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ನಟ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದರು.

1973 ರಲ್ಲಿ ಸಂಜೀರ್ ಎಂಬ ಒಂದೇ ಒಂದು ಚಿತ್ರವು ಅಮಿತಾಬ್ ಬಚ್ಚನ್ ಅವರನ್ನು ಸೂಪರ್ ಸ್ಟಾರ್ ಮಾಡಿತು. ಸಲೀಂ ಜಾವೇದ್ ಮತ್ತು ಅಮಿತಾಬ್ ಬಚ್ಚನ್ ತಂಡ ನಂತರ ಬೆಳ್ಳಿತೆರೆಯಲ್ಲಿ ಮೋಡಿಯನ್ನೇ ಮಾಡಿತು.

 

 

Related