ಅರಕೇರೆಯಲ್ಲಿ ದಿನಸಿ ಕಿಟ್ ವಿತರಣೆ

ಅರಕೇರೆಯಲ್ಲಿ ದಿನಸಿ ಕಿಟ್ ವಿತರಣೆ

ಬೆಂಗಳೂರು : ರಾಜ್ಯ ಸರ್ಕಾರ ಜೂನ್1 4 ರಂದು ಅನ್ಲಾಕ್ ಪ್ರಕ್ರಿಯೆ ಜಾರಿಗೊಳಿಸಿ ಹೊಸ ಮಾರ್ಗಸೂಚಿ ಹೊರಡಿಸಿ ಗಾರ್ಮೆಂಟ್ಸ್ ನಂತಹ ಕಾರ್ಖಾನೆಗಳನ್ನು ಓಪನ್ ಮಾಡಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಹಾಗಾಗಿ ಲಾಕ್‌ಡೌನ್ ಓಪನ್ ಆಗುವ ಮೊದಲೇ ಪ್ರತಿಯೊಂದು ಕಾರ್ಮಿಕರಿಗೆ ವ್ಯಾಕ್ಸಿನೇಷನ್ ಮಾಡಬೇಕೆಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರವರಿಗೆ ಹಾಗೂ ಮುಖ್ಯ ಕಾರ್ಯದರ್ಶಿಗಳ ಬಳಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಸತೀಶ್ ರೆಡ್ಡಿ ಹೇಳಿದ್ದಾರೆ.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಬಡ ಕೂಲಿಕಾರ್ಮಿಕರಿಗೆ, ಗಾರ್ಮೆಂಟ್ಸ್ ನೌಕರರಿಗೆ ಸುಮಾರು 50.000 ಆಹಾರ ಸಾಮಾಗ್ರಿಗಳ ಕಿಟ್‌ಗಳನ್ನು ವಿತರಣೆ ಮಾಡಿದ್ದು, ಅದರ ಭಾಗವಾಗಿ ಇಂದು ಅರಕೇರೆ ವಾರ್ಡ್ ಹಾಗೂ ಮಂಗಮ್ಮನಪಾಳ್ಯ ವಾರ್ಡ್ ನಲ್ಲಿ ಆಹಾರದ ಕಿಟ್ ಗಳನ್ನು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಸತೀಶ್ ರೆಡ್ಡಿ, ಕೊರೋನಾ ಲಾಕ್‌ಡೌನ್ ಆದ ಸಂದರ್ಭದಿAದಲೂ ನಿರಂತರವಾಗಿ ಎಲ್ಲಾ ವಾರ್ಡ್ ಗಳಲ್ಲಿಯೂ ಪ್ರತಿ ಕುಟುಂಬಕ್ಕೆ ದಿನಸಿ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆ.

ಇಡೀ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ವಾರ್ಡ್ ಗಳಲ್ಲಿಯೂ ಸಹ ಈಗಾಗಲೇ ಸುಮಾರು 50 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ದಿನಸಿ ಕಿಟ್‌ಗಳನ್ನು ತಲುಪಿಸಿದ್ದೇವೆ. ಇನ್ನೂ 25000 ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ತಲುಪಿಸುವಂತಹ ಗುರಿಯನ್ನು ಹೊಂದಿದ್ದೇವೆ. ಯಾರು ಕೂಡ ಈ ಕೊರೋನಾ ಸಂದರ್ಭದಲ್ಲಿ ಹಸಿವಿನಿಂದ ಬಳಲಬಾರದು ಎನ್ನುವ ಉದ್ದೇಶದಿಂದ ನಾವೆಲ್ಲರು ಕೂಡ ಈ ಕೆಲಸವನ್ನು ಮಾಡುತ್ತಿದ್ದೇವೆ. ಭಾರತೀಯ ಜನತಾ ಪಾರ್ಟಿ ಕಳೆದ ಕೋವಿಡ್ ಸಂದರ್ಭದಲ್ಲೂ ಸಹ ಕೆಲಸ ಮಾಡಿದೆ. ಈ ಬಾರಿಯೂ ಕೂಡ ಪ್ರಾಮಾಣಿಕತೆಯಿಂದ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ ಎಂದರು.

ಆದರೆ ಇನ್ನೂ ಸಾಕಷ್ಟು ಜನ ಕಾರ್ಮಿಕರಿಗೆ ವ್ಯಾಕ್ಸಿನೇಷನ್ ಆಗಲಿಲ್ಲ ಹಾಗಾಗಿ ಗಾರ್ಮೇಂಟ್ಸ್ ಗಳಲ್ಲಿ ಜನರು ಒಂದೆಡೆ ಒಟ್ಟಾಗಿ ಸೇರಿದಾಗ ಸೋಂಕು ಹರಡುವ ಸಾಧ್ಯತೆ ಇದ್ದು ಕಾರ್ಮಿಕರು ಜೀವ ಭಯದಲ್ಲಿ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ವ್ಯಾಕ್ಸಿನೇಷನ್ ಬಹಳ ನಿಧಾನಗತಿಯಲ್ಲಿ ಆಗುತ್ತಿದ್ದು, ಒಂದು ದಿನಕ್ಕೆ 500 ರಿಂದ 600 ಲಸಿಕೆಗಳು ಮಾತ್ರ ಬರುತ್ತಿದೆ. ಅತಿಹೆಚ್ಚು ಗಾರ್ಮೇಂಟ್ಸ್ ಹಾಗೂ ಕಾರ್ಖಾನೆಗಳು ಬೊಮ್ಮನಹಳ್ಳಿ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದು, ಸರ್ಕಾರದಿಂದ ಬರುತ್ತಿರುವ ವ್ಯಾಕ್ಸಿನ್ ಕಾರ್ಮಿಕರಿಗೆ ಸಾಕಾಗುತ್ತಿಲ್ಲ ಆದ್ದರಿಂದ ಇನ್ನೂ ಸ್ವಲ್ಪ ವ್ಯಾಕ್ಸಿನೇಷನ್ ಕೊಡುವುದನ್ನು ಹೆಚ್ಚಿಸಿದರೆ.

ಈ ಭಾಗದಲ್ಲಿ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕೊರೊನಾ ವೈರಸ್‌ನ ಭಯವಿಲ್ಲದೆ ಕೆಲಸ ಮಾಡುವಂತಾಗುತ್ತದೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಒಂದು ದಿನಕ್ಕೆ 150 ರಿಂದ 100 ಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ದಾಖಲಾಗುತ್ತಿದ್ದು, ಗಣನೀಯವಾಗಿ ಇಳಿಮುಖ ಕಾಣುತ್ತಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆಯಾಗಬೇಕೆಂದು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಗಾರ್ಮೆಂಟ್ಸ್ನಲ್ಲಿ ಹೆಚ್ಚು ಜನ ಕೆಲಸ ಮಾಡುತ್ತಿರುತ್ತಾರೆ ಆದ್ದರಿಂದ ಅವರಿಗೆ ವ್ಯಾಕ್ಸಿನೇಷನ್ ಮಾಡಿದರೆ ಅವರಿಗೂ ಕೂಡ ಒಂದು ಧೈರ್ಯ ಬರುತ್ತದೆ ಹಾಗೂ ಕಾರ್ಮಿಕರು ಕೂಡ ನೆಮ್ಮದಿಯಿಂದ ಕೆಲಸ ಮಾಡಬಹುದು ಎಂದು ಶಾಸಕ ಸತೀಶ್ ರೆಡ್ಡಿ ತಿಳಿಸಿದರು.

ಬಳಿಕ ಬಿಬಿಎಂಪಿ ಮಾಜಿ ಮಹಾನಗರ ಪಾಲಿಕೆಯ ಸದಸ್ಯ ಪುರುಷೋತ್ತಮ್ ಮಾತನಾಡಿ, ಇಂದು ಅರಕೇರೆ ವಾರ್ಡ್ 93 ರಲ್ಲಿ ಸುಮಾರು ಹತ್ತು ಸಾವಿರ ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನ ಶಾಸಕ ಸತೀಶ್ ರೆಡ್ಡಿಯವರ ನೇತೃತ್ವದಲ್ಲಿ ವಿತರಣೆ ಮಾಡುತ್ತಿದ್ದೇವೆ. ಕೊರೋನಾ ಸಂಕಷ್ಟದಲ್ಲಿ ಇರುವಂತಹ ಜನರಿಗೆ ಹತ್ತರಿಂದ 15 ದಿನಗಳಿಗೆ ಆಗುವಷ್ಟು ಆಹಾರದ ಫುಡ್ ಕೀಟ್ ಗಳನ್ನು ವಿತರಣೆ ಮಾಡುತ್ತಿದ್ದೇವೆ, ಪ್ರತಿಯೊಂದು ಮನೆಮನೆಗೆ ಖುದ್ದಾಗಿ ನಾವುಗಳು ತೆರಳಿ ಆಹಾರದ ಕೀಟ್‌ಗಳು ವಿತರಿಸುತ್ತೇವೆ ಎಂದು ತಿಳಿಸಿದರು.

Related