ಕಾಂಗ್ರಸ್ ಲೂಟಿಕೋರರ ಸರ್ಕಾರ: ಆರ್​ ಅಶೋಕ್ ​​

ಕಾಂಗ್ರಸ್ ಲೂಟಿಕೋರರ ಸರ್ಕಾರ: ಆರ್​ ಅಶೋಕ್ ​​

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ 40% ಕಮಿಷನ್ ಪಡೆಯುತ್ತಿತ್ತು ಎಂದು ಆರೋಪ ಮಾಡಲಾಗುತ್ತಿತ್ತು. ಇದರ ಬೆನ್ನೆಲ್ಲೇ ಈಗ ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕಾಂಗ್ರೆಸ್ ಸರ್ಕಾರದ ಮೇಲೂ 40% ಕಮಿಷನ್ ಆರೋಪ ಮಾಡಿದ್ದಾರೆ.

ಇನ್ನು ಈ ಸಂಬಂಧ ಆರ್​ ಅಶೋಕ್​ ಪ್ರತಿಕ್ರಿಯೆ ನೀಡಿದ್ದು ಕಾಂಗ್ರೆಸ್ ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದತ್ತು. ಆದರಿಗ ಕಾಂಗ್ರೆಸ್ ಸರ್ಕಾರ 40% ಕಿನ ಹೆಚ್ಚು ಕಮಿಷನ್ ಪಡೆದುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಆರ್​ ಅಶೋಕ್​  ಆರೋಪ ಮಾಡಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಲೂಟಿಕೋರರ ಸರ್ಕಾರ ಎಂಬುದು ಸಾಬೀತು ಆಗಿದೆ. ಎಲ್ಲ ಮಂತ್ರಿಗಳು ಅವರವರ ಹೆಸರಲ್ಲಿ ಟ್ಯಾಕ್ಸ್​ ಹಾಕಿಕೊಂಡಿದ್ದಾರೆ. ಡೆವಲಪರ್​ಗಳು, ಗುತ್ತಿಗೆದಾರರು ಹೇಳುವ ಪ್ರಕಾರ ಸ್ಕ್ವೇರ್ ಫೀಟ್ ಜಾಗಕ್ಕೆ ಹಣ ನಿಗದಿ ಮಾಡಿದ್ದರೆ. ಸ್ಕ್ವೇರ್ ಫೀಟ್​ ಜಾಗಕ್ಕೆ 75 ರೂ. ಹಣ ನಿಗದಿಪಡಿಸಿದ್ದಾರೆ. 4000 ಚದರ ಅಡಿ ಮೇಲೆ ಬಿಲ್ಡಿಂಗ್ ಕಟ್ಟುವವರಿಂದ ಹಣ ವಸೂಲಿ ಮಾಡಿದ್ದಾರೆ. 80% ಲೂಟಿ ಮಾಡುತ್ತಿರುವುದು ನಿಜ ಎಂದು ವಿರೋಧ ಪಕ್ಷದ ನಾಯಕ ಆರ್​ ಅಶೋಕ್​ ಆರೋಪ ಮಾಡಿದರು.

ನಿಮ್ಮ ಮುಖದ ಮೇಲೆ ಯಾವ ಪೋಸ್ಟರ್ ಅಂಟಿಸಿಕೊಳ್ಳುತ್ತೀರಾ? ಈಗ ಪೇಸಿದ್ದರಾಮಯ್ಯ ಅಂತಾ ಪೋಸ್ಟರ್ ಅಂಟಿಸಿಕೊಳ್ಳುತ್ತೀರಾ? ಪಂಚ ರಾಜ್ಯ ಚುನಾವಣೆಗೆ ದುಡ್ಡು ಲೂಟಿ ಮಾಡಿ ಕಳಿಸಿದ್ದಾಯ್ತು. ಈಗ ಲೋಕಸಭಾ ಚುನಾವಣೆಗೂ ಲೂಟಿ ಮಾಡಿ ಕಳಿಸುತ್ತಿದ್ದೀರಾ?ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಮಂಗಳೂರಿನಲ್ಲಿ ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂ ವಿರುದ್ಧ ಹೋರಾಟಕ್ಕೆ ಎಸ್​ಡಿಪಿಐ ಕರೆ ನೀಡಿರುವ ವಿಚಾರವಾಗಿ ಮಾತನಾಡಿದ ಅವರು ಇದು ದೇಶದ್ರೋಹದ ಹೇಳಿಕೆ. ಪಿಎಫ್​ಐ ಬ್ಯಾನ್ ಆಗಿದೆ. ಎಸ್​ಸಿಪಿಐನ ಒಂದು ಅಂಗ ಸಂಸ್ಥೆ ಪಿಎಫ್​ಐ. ಪಿಎಫ್​ಐನಲ್ಲಿರುವವರು ಈಗ ಎಸ್​ಸಿಪಿಐಗೆ ಬಂದು ಇಲ್ಲಿ ಸೇರಿಕೊಂಡಿದ್ದಾರೆ. ಕೋರ್ಟ್ ಆದೇಶದ ಪ್ರಕಾರ ಅಲ್ಲಿ ಪೂಜೆ ಆಗುತ್ತಿದೆ. ಜ್ಞಾನವಾಪಿ ಅದು ಹಿಂದು ದೇವಾಲಯ ಅಂತ ಕುರುಹು ಸಿಕ್ಕಿದೆ. ಇದಕ್ಕೆ ಎಲ್ಲಾ ಪೂರಕ ದಾಖಲೆ ಸಿಕ್ಕಿದೆ. ರಾಮನ ಮಂದಿರ ಕಟ್ಟಿರುವುದು ಕೋರ್ಟ್ ಆದೇಶದ ಮೇರೆಗೆ. ಅಲ್ಲಿ ಉರ್ದು, ಅರೇಬಿಕ್ ಸಾಕ್ಷಿ ಸಿಕ್ಕಿದ್ದರೆ ಹೇಳಬಹುದಿತ್ತು. ಆದರೆ ಜ್ಞಾನವಾಪಿಯಲ್ಲಿ ಸಿಕ್ಕಿರುವುದು ಹಿಂದೂ ದೇವಾಲಯದ ಪೂರವೆಗಳು. ಕೋರ್ಟ್ ತೀರ್ಪು ನಿಮಗೆ ಒಪ್ಪಿಗೆ‌ ಇಲ್ಲ ಅಂದರೆ ಹೈಕೋರ್ಟ್, ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಹೋಗಬಹುದು‌ ಎಂದರು.

Related