ರಾಜ್ಯದ ಗ್ರಾಹಕರಿಗೆ ಸಿಹಿ ಸುದ್ದಿ

ರಾಜ್ಯದ ಗ್ರಾಹಕರಿಗೆ ಸಿಹಿ ಸುದ್ದಿ

ಬೆಂಗಳೂರು: ರಾಜ್ಯದ ಜನ ಈಗಾಗಲೇ ಬೆಲೆ ಏರಿಕೆ ಬಿಸಿಯಿಂದ ತತ್ತರಿಸುತ್ತಿದ್ದಾರೆ ಇದರ ಬೆನ್ನೆಲೆ ರಾಜ್ಯ ಸರ್ಕಾರ ಗ್ರಾಹಕರಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದೆ.

ಹೌದು, ರಾಜ್ಯದ ಜನ ಈಗಾಗಲೇ ಏರಿಕೆಯಿಂದ ಜನರು ಕುಸಿದ್ದು ಈಗ ಸ್ವಲ್ಪ ಜನರಿಗೆ ರಿಲೀಫ್ ಸಿಕ್ಕಿದೆ ಎಂದು ಹೇಳಬಹುದು.

ಶೀಘ್ರವೇ ಮತ್ತಷ್ಟು ಅಡುಗೆ ಎಣ್ಣೆ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರದಿಂದ ಸುದ್ದಿ ಬಂದಿದೆ.

ಖಾದ್ಯ ತೈಲದ ಬೆಲೆಗಳು ಇಳಿದಿವೆ ಎಂದು ಸರ್ಕಾರ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ. ಖಾದ್ಯ ತೈಲದ ದೇಶೀಯ ಬೆಲೆಗಳ ಮೇಲೆ ಕೇಂದ್ರ ಸರ್ಕಾರವು ಸೂಕ್ಷ್ಮವಾಗಿ ಗಮನಿಸುತ್ತಿದೆ, ಇದರಿಂದಾಗಿ ಅಂತರರಾಷ್ಟ್ರೀಯ ಬೆಲೆಗಳ ಕುಸಿತದ ಲಾಭವನ್ನು ದೇಶದ ಸಾಮಾನ್ಯ ಗ್ರಾಹಕರಿಗೆ ವರ್ಗಾಯಿಸಬಹುದು ಎಂದು ಅವರು ಹೇಳಿದ್ದಾರೆ

ಕಳೆದ ಒಂದು ವರ್ಷದಲ್ಲಿ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ, ಸೋಯಾಬೀನ್ ಎಣ್ಣೆ, ಪಾಮೋಲಿನ್ ಎಣ್ಣೆಯ ಬೆಲೆಗಳು ಗಮನಾರ್ಹವಾಗಿ ಇಳಿದಿವೆ. ಇದರ ಅಡಿಯಲ್ಲಿ, ಸೂರ್ಯಕಾಂತಿ ಎಣ್ಣೆ ಶೇಕಡಾ 29, ಸೋಯಾಬೀನ್ ಎಣ್ಣೆ ಶೇಕಡಾ 19 ಮತ್ತು ಪಾಮೋಲಿನ್ ಎಣ್ಣೆ ಶೇಕಡಾ 25 ರಷ್ಟು ಅಗ್ಗವಾಗಿದೆ ಎಂದರು.

 

Related