ಚಿರು-ಮೇಘನಾ ಪುತ್ರನಿಗಿಂದು ಶುಭದಿನ

ಚಿರು-ಮೇಘನಾ ಪುತ್ರನಿಗಿಂದು ಶುಭದಿನ

ಬೆಂಗಳೂರು : ದಿ. ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಪುತ್ರನ ತೊಟ್ಟಿಲು ಶಾಸ್ತ್ರ ಅದ್ಧೂರಿಯಾಗಿ ನೆರವೇರಿದೆ. ಚಿರು ಕಳೆದುಕೊಂಡು ದುಃಖದಲ್ಲಿದ್ದ ಸರ್ಜಾ ಕುಟುಂಬಕ್ಕೆ ಚಿರು ಮಗುವಿನ ಆಗಮನ ನೋವನ್ನು ಮರೆಸುನ ಸಂಭ್ರಮದ ಕ್ಷಣವಾಗಿದ್ದು, ಇದೀಗ ತೊಟ್ಟಿಲು ಶಾಸ್ತ್ರ ನೆರವೇರಿದೆ.

ಇಂದು ಸುಂದರ್ ರಾಜ್ ಹಾಗೂ ಪ್ರಮಿಳಾ ಜೋಷಾಯ್ ನಿವಾಸದಲ್ಲಿ ಶಾಸ್ತ್ರೋಕ್ತವಾಗಿ ಚಿರು ಪುತ್ರನ ತೊಟ್ಟಿಲು ಶಾಸ್ತ್ರ ನೆರವೇರಿದ್ದು, ಕುಟುಂಬ ಸದಸ್ಯರು ಭಾಗಿಯಾಗಿದ್ದರು.

ಇನ್ನು ಮಗುವಿಗಾಗಿ ಗದಗ ಮಹಿಳಾ ಸಂಘದ ವತಿಯಿಂದ ಬಣ್ಣ ಬಣ್ಣದ ಚಿತ್ತಾರವುಳ್ಳ ವಿಶೇಷವಾದ ಹ್ಯಾಂಡ್ ಮೇಡ್ ತೊಟ್ಟಿಲು ನೀಡಲಾಗಿದ್ದು, ಅಭಿಮಾನಿಗಳು ನೀಡಿರುವ ಈ ತೊಟ್ಟಿಲಿನಲ್ಲಿಯೇ ತೊಟ್ಟಿಲು ಶಾಸ್ತ್ರ ನೆರವೇರಿಸಲಾಗಿದೆ.

Related