ನಡಹಳ್ಳಿಗೆ ಸಚಿವ ಸ್ಥಾನ ನೀಡಿ

ನಡಹಳ್ಳಿಗೆ ಸಚಿವ ಸ್ಥಾನ ನೀಡಿ

ತಾಳಿಕೋಟೆ – ಉತ್ತರ ಕರ್ನಾಟಕ ಸಮಗ್ರ ಅಭಿವೃದ್ದಿಯಾಗಲು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್.ಪಾಟೀಲ್‌ ರವರಿಗೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಬಿಜೆಪಿ ಮುಖಂಡ ಮಲ್ಲನಗೌಡ ಪೊಲೀಸ್‌ಪಾಟೀಲ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯಿಸಿದರು.

ಪಟ್ಟಣದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕರ್ನಾಟಕ ಭಾಗ ಹಿಂದುಳಿದ ಪ್ರದೇಶವಾದ ಮುದ್ದೇಬಿಹಾಳ ಮತಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಎ.ಎಸ್.ಪಾಟೀಲ್ ಪ್ರಥಮ ಬಾರಿಗೆ ಬಿಜೆಪಿ ಧ್ವಜವನ್ನು ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಹಾರಿಸಿದ್ದಾರೆ. ಮೂರು ಬಾರಿ ಶಾಸಕರಾಗಿರುವ ನಡಹಳ್ಳಿ ಪರಿಶ್ರಮದ ಫಲವಾಗಿ ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿಯೂ ಸಹ ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿದ ಅವರು ಜಿಲ್ಲೆಯ ಸಮಗ್ರ ನೀರಾವರಿ ಹೋರಾಟವನ್ನು ಮಾಡುವ ಮೂಲಕ ರೈತರ ಕಷ್ಟಗಳನ್ನು ಅರಿತಿದ್ದಾರೆ. ಹೋರಾಟದ ಮೂಲಕವೇ ಯೋಜನೆಗಳನ್ನು ತಂದಿರುವ ಅವರು ಸಮಗ್ರ ಉತ್ತರ ಕರ್ನಾಟಕ ಅಭಿವೃದ್ದಿಗೆ ಹೋರಾಟವನ್ನು ಮಾಡಿದ್ದಾರೆ.

ವಿಜಯಪುರದಿಂದ ರಾಯಚೂರದವರೆಗೆ ಹಾಗೂ ರಾಯಚೂರದಿಂದ ಬೆಳಗಾವಿಯವರೆಗೆ ಯಾತ್ರೆ ಮಾಡುವ ಮೂಲಕ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ತಿಳಿದುಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ತಿಳಿದುಕೊಂಡಿರುವ ಶಾಸಕ ನಡಹಳ್ಳಿಯವರಿಗೆ ಸಚಿವ ಸ್ಥಾನ ನೀಡುವುದರಿಂದ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ದಿಯಾಗುತ್ತದೆ. ಹಿಗಾಗಿ ಬಿಜೆಪಿ ಹೈಕಮಾಂಡ್ ಹಾಗೂ ಸಿಎಂ ಅವರು ನಡಹಳ್ಳಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾಜಿ ತಾ.ಪಂ ಅಧ್ಯಕ್ಷ ರಾಜುಗೌಡ ಕೋಳೂರ, ಕುಮಾರಗೌಡ ಅನಂತರೆÀಡ್ಡಿ, ಮಲ್ಲನಗೌಡ ಯಾಳಗಿ, ರಾಜುಗೌಡ ಯಾಳಗಿ, ಮಲ್ಲಯ್ಯ ಸಾಲಿಮಠ, ರಾಮನಗೌಡ ಪಾಟೀಲ್ ಇನ್ನಿತರರು ಇದ್ದರು.

Related