ಮನೆ ಕುಸಿದು ಬಾಲಕಿ ಸಾವು

ಮನೆ ಕುಸಿದು ಬಾಲಕಿ ಸಾವು

ವಿಜಯಪುರ : ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಡೊಂಕಮಡು ಗ್ರಾಮದಲ್ಲಿ ಮನೆಯ ಮೆಲ್ಚಾವಣಿ ಕುಸಿದು 11 ವರ್ಷದ ಮರೆವ್ವ ಹುಲಗಪ್ಪ ಬಿಜ್ಜೂರ್ ಬಾಲಕಿ ಸಾವನಪ್ಪಿ,. ಘಟನೆಯಲ್ಲಿ ರೇಖಾ ಲೋಟಗೇರಿ ಎಂಬ ಬಾಲಕಿಗೆ ತಲೆ, ಕಾಲಿಗೆ ಗಂಭೀರ ಪೆಟ್ಟಾಗಿದೆ.

ಇದಲ್ಲದೆ ಮುದ್ದೇಬಿಹಾಳ ತಾಲೂಕಿನ ಚವನಬಾವಿ ಗ್ರಾಮದಲ್ಲಿ 12 ಮನೆಗಳು ಕುಸಿಯುವ ಹಂತಕ್ಕೆ ಬಂದಿದ್ದು, ಸತತ ಮಳೆಯಿಂದ ನೆನೆದ ಗೋಡೆಗಳಲ್ಲಿ ಬಿರುಕು ಕಾಣಿಕೊಂಡಿದೆ.

ಇದರಿಂದಾಗಿ ಚವನಬಾಗಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಒಟ್ಟು 135ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿವೆ. 4 ಜಾನುವಾರುಗಳು ಸಾವಿಗೀಡಾಗಿವೆ.

Related