ಮೈಸೂರು, ಮಾ. 17 : ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ನಾಗರಹೊಳೆ ವನ್ಯಜೀವಿ ವಿಭಾಗದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿರುವ ವರಲಕ್ಷ್ಮಿ ಭಾನುವಾರ ಹೆಣ್ಣು ಮರಿಗೆ ಜನ್ಮ ನೀಡಿದೆ.
ಹದಿನೈದು ವರ್ಷಗಳಿಂದ ಶಿಬಿರದಲ್ಲಿರುವ ವರಲಕ್ಷ್ಮಿಈ ಹಿಂದೆಯೂ ಎರಡು ಮರಿಗಳಿಗೆ ಜನ್ಮ ನೀಡಿದ್ದು, ಮರಿಗಳು ಈಗ ಬೆಳೆದು ದೊಡ್ಡವಾಗಿವೆ. ಕಳೆದ ಸೆಪ್ಟೆಂಬರ್ ನಲ್ಲಿ ನಡೆದ ಮೈಸೂರು ದಸರಾದ ಗಜಪಡೆಯಲ್ಲಿ ವರಲಕ್ಷ್ಮಿ ಪಾಲ್ಗೊಂಡಿತ್ತು. ಈಗ ವರಲಕ್ಷ್ಮಿಮತ್ತು ಮರಿ ಆನೆ ಎರಡೂ ಆರೋಗ್ಯವಾಗಿವೆ ಎಂದು ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಮುಜಿಬ್ ರೆಹಮನ್ ತಿಳಿಸಿದ್ದಾರೆ.
ಆನೆ ಮರಿ ಮತ್ತು ತಾಯಿ ಆನೆಯನ್ನು ಶಿಬಿರದ ಇತರ ಆನೆಗಳು ತಮ್ಮ ಮಧ್ಯವೇ ಇರಿಸಿಕೊಂಡು ಪ್ರೀತಿಯಿಂದ ನೋಡಿಕೊಳ್ಳುತ್ತಿವೆ.