ಉಚಿತ ಲಸಿಕೆ ಪಡೆದುಕೊಳ್ಳಿ

ಉಚಿತ ಲಸಿಕೆ ಪಡೆದುಕೊಳ್ಳಿ

ದೇವನಹಳ್ಳಿ: ಉಚಿತ ಕೋವಿಡ್ ಲಸಿಕೆ ಅಭಿಯಾನವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಪುರಸಭಾ ಸದಸ್ಯ ನಂದಕುಮಾರ್ ಶುಕ್ರವಾರ ತಿಳಿಸಿದರು. ವಿಜಯಪುರ ಪಟ್ಟಣದ ರೇಣುಕಾ ಎಲ್ಲಮ್ಮ ದೇವಿ ದೇವಾಲಯ ಆವರಣದಲ್ಲಿ ಆರೋಗ್ಯ ಇಲಾಖೆ, ಅಂಗನವಾಡಿ ಕಾರ್ಯಕರ್ತರು ಪುರಸಭೆ 14 ,12 ವಾರ್ಡ್ ಸದಸ್ಯರ ಸಹಕಾರದಿಂದ ಉಚಿತ ಕೋವಿಡ್ ಲಸಿಕೆ ಅಭಿಯಾನದಲ್ಲಿ ನಂದಕುಮಾರ್ ಮಾತನಾಡಿದರು. ಕೋವಿಡ್ ಮೂರನೆ ಅಲೆ ಎದುರಾಗುತ್ತಿದೆ, 18 ರಿಂದ 45 ವರ್ಷದ ಮೇಲ್ಪಟ್ಟವರು ಲಸಿಕೆ ಪಡೆದು ರೋಗಕ್ಕೆ ತುತ್ತಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು. ಮುನಿರಾಜು, ಅಂಬರೀಶ್, ಮಂಜುನಾಥ್, , ಮುನಿಕೃಷ್ಣ, ಪ್ರಕಾಶ್,ಮುನಿವೆಂಕಟಸ್ವಾಮಿ, ವಿಜಯಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಸ್ಯಾಂ ಸುಂದರ್, ಆರೋಗ್ಯ ಸಿಬ್ಬಂದಿಗಳಾದ ಸರಸಮ್ಮ, ಮಮತಾ, ಕುಮಾರಿ, ವಾರ್ಡ್ ನ ಸಾರ್ವಜನಿಕರು ಇದ್ದರು.

Related