ಉಚಿತ ಮರುಪೂರ್ಣ ಸಿಲೆಂಡರ್ ನೀಡಲು ಸೂಚನೆ

ಉಚಿತ ಮರುಪೂರ್ಣ ಸಿಲೆಂಡರ್ ನೀಡಲು ಸೂಚನೆ

ಕೊಪ್ಪಳ : ಪ್ರಸ್ತುತ ದೇಶದಾದ್ಯಂತ ಕೋವಿಡ್-19 ತುರ್ತು ಪರಿಸ್ಥಿತಿ ಮುಂದುವರೆದಿದ್ದು, ಆದ್ಯತಾ ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ಈಗಾಗಲೇ ಅನಿಲ ಸಂಪರ್ಕ ಪಡೆದಿರುವ ಫಲಾನುಭವಿಗಳಿಗೆ ಮೂರು ಉಚಿತ ಮರುಪೂರ್ಣ ಸಿಲೆಂಡರ್‌ಗಳನ್ನು ನೀಡಲು ನಿರ್ಧರಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಮೊದಲನೇ ಮರುಪೂರ್ಣ ಸಿಲೆಂಡರ್‌ನ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ತಿಳಿಸಿದ್ದಾರೆ.

ಯೋಜನೆಯ ಫಲಾನುಭವಿಗಳು ಮೊದಲನೇ ಮರುಪೂರ್ಣ ಸಿಲೆಂಡರ್‌ನ್ನು ಗ್ಯಾಸ್ ಏಜೆನ್ಸಿ ಮೂಲಕ ಪಡೆದರೆ ಮಾತ್ರ ಎರಡನೇ ಮರುಪೂರ್ಣ ಸಿಲೆಂಡರ್‌ನ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು. ಆದ್ದರಿಂದ ಅರ್ಹ ಫಲಾನುಭವಿಗಳು ಕೂಡಲೇ ಸಂಬಂಧಿಸಿದ ಅನಿಲ ಏಜೆನ್ಸಿಗಳಿಗೆ ಭೇಟಿ ನೀಡಿ ಮೊದಲನೇ ಮರುಪೂರ್ಣ ಸಿಲೆಂಡರ್ ಪಡೆದು ಯೋಜನೆಯ ಪೂರ್ಣ ಲಾಭವನ್ನು ಪಡೆಯುವಂತೆ ತಿಳಿಸಿದ್ದಾರೆ.

Related