ನಾಲ್ವರು ಆಸ್ಪತ್ರೆಗೆ ದಾಖಲು

ನಾಲ್ವರು ಆಸ್ಪತ್ರೆಗೆ ದಾಖಲು

ಉಡುಪಿ. ಫೆ. 08 : ಉಡುಪಿಯಲ್ಲಿ ನಾಲ್ವರು ಶಂಕಿತರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಬ್ರಹ್ಮಾವರ ಮೂಲದ ದಂಪತಿ,ಮಗು ಹಾಗೂ ಕಾಪುವಿನ ಯುವಕ ಆಸ್ಪತ್ರೆಗೆ ದಾಖಲಾದವರು. ಪತಿ-ಪತ್ನಿ ಮತ್ತು ಮಗು ಚೀನಾದಲ್ಲಿ ಉದ್ಯೋಗಿಗಳಾಗದ್ದು, 15 ದಿನಗಳ ಹಿಂದೆ ಭಾರತಕ್ಕೆ ವಾಪಸ್ಸಾಗಿದ್ದರು. ಕಾಪುವಿನ ಯುವಕ ಜಪಾನ್ನಿಂದ 20 ದಿನಗಳ ಹಿಂದೆ ಮರಳಿದ್ದರು. ಆ ಸಂದರ್ಭ ಸಂದರ್ಭ ಕರೊನಾ ಸ್ಕ್ರೀನಿಂಗ್ ವ್ಯವಸ್ಥೆ ವಿಮಾನ ನಿಲ್ದಾಣಗಳಲ್ಲಿ ಇರಲಿಲ್ಲ. ಕರೊನಾ ಚರ್ಚೆಯಲ್ಲೂ ಇರಲಿಲ್ಲ.
ಈಗ ಈ ನಾಲ್ವರು ಸಾಮಾನ್ಯ ಶೀತ, ಜ್ವರ, ಕೆಮ್ಮುವಿನಿಂದ ಬಳಲುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯ ಐಸೋಲೇಶನ್ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವುದನ್ನು ಆರೋಗ್ಯ ಇಲಾಖೆ ಖಚಿತಪಡಿಸಿದೆ.

Related