ರಾಜಧಾನಿಯಲ್ಲಿ ವಂಚಕರ ಜಾಲ ಪತ್ತೆ!

ರಾಜಧಾನಿಯಲ್ಲಿ ವಂಚಕರ ಜಾಲ ಪತ್ತೆ!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹಣ ವಂಚನೆಯ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು ಇದರಿಂದ ಜನರು ಎಚ್ಚೆತ್ತುಕೊಂಳ್ಳದಿದ್ದರೆ ತಮ್ಮ ಹೂಡಿಕೆಯ ಹಣವನ್ನು ಹಾಳು ಮಾಡಿಕೊಳ್ಳುವುದು ಗ್ಯಾರಂಟಿ.

ಹೌದು ಇತ್ತೀಚಿಗೆ ವಂಚನೆಯ ಪ್ರಕರಣಗಳು ಹೆಚ್ಚಾಗಿ ಬೆಳಗ್ಗೆ ಬರುತ್ತಿರುವುದರಿಂದ ಜನ ತಮ್ಮ ಹೂಡಿಕೆಯ ಹಣವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಇಂಥದ್ದೇ ಒಂದು ಪ್ರಕರಣ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದ್ದು ಬರೋಬ್ಬರಿ 25 ಕೋಟಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಯೆಸ್…ಕಂಪನಿಯೊಂದರ ಮೂಲಕ ಹೂಡಿಕೆ ಹಗರಣ ನಡೆಸಿ 700ಕ್ಕೂ ಹೆಚ್ಚು ಜನರಿಗೆ ₹25 ಕೋಟಿ ವಂಚಿಸಿದ ಆರೋಪದ ಮೇಲೆ ಬೆಂಗಳೂರಿನಲ್ಲಿ ಸಿಸಿಬಿ ಇಬ್ಬರನ್ನು ಬಂಧಿಸಿದೆ. ಪ್ರಮ್ಯಾ ಇಂಟರ್‌ನ್ಯಾಶನಲ್‌ನ ಮಾಲೀಕ ಪ್ರದೀಪ್ ಕುಮಾರ್ (32) ಮತ್ತು ಕಂಪನಿಯ ಏಜೆಂಟ್ ವಸಂತ್ ಕುಮಾರ್ (52) ಅವರನ್ನು ಸಂಘಟಿತ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಇವರಿಬ್ಬರು 700 ಜನರಿಂದ 25 ಕೋಟಿ ರೂಪಾಯಿಯನ್ನು ವಂಚಿಸಿದ್ದಾರೆ ಎಂದು ಪೊಲೀಸ್ ತನಿಖೆಗಳು ತೋರಿಸುತ್ತಿರುವಾಗ, ಈ ಅಂಕಿ ಅಂಶವು ತುಂಬಾ ಹೆಚ್ಚಿರಬಹುದು ಮತ್ತು ಹೆಚ್ಚಿನ ಜನರು ಭಾಗಿಯಾಗಿರಬಹುದು ಎಂದು ಅನುಮಾನ ಪಡಲಾಗಿದೆ.

ವಂಚನೆ ಮತ್ತು ಅನಿಯಂತ್ರಿತ ಠೇವಣಿ ಯೋಜನೆಗಳ (ಬಿಯುಡಿಎಸ್) ನಿಷೇಧ ಕಾಯ್ದೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ವಂಚಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

 

Related