ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿ ಮೇಲೆ ಫೈರಿಂಗ್

ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿ ಮೇಲೆ ಫೈರಿಂಗ್

ಕಲಬುರಗಿ : ನಗರ ಹೊರವಲಯದ ಸ್ವಾಮಿ ಸರ‍್ಥ ದೇವಸ್ಥಾನದ ಬಳಿ ಭಾನುವಾರ ರಾತ್ರಿ ಗಾಂಜಾ ಸಾಗಣೆ ಮಾಡುತ್ತಿದ್ದ ಆರೋಪಿ ಬಲಗಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.

ಆರೋಪಿ ಭೀಮು (34) ಮೇಲೆ ಫೈರಿಂಗ್ ನಡೆದಿದ್ದು, ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಎನ್ನೋ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಲು ಹೋಗಿದ್ದರು.

ಈ ವೇಳೆ ಪೋಲಿಸರ ಮೇಲೆ ಆರೋಪಿ ಭೀಮು ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದ. ಬಳಿಕ ಆತ್ಮ ರಕ್ಷಣೆಗಾಗಿ ಕಲಬುರಗಿ ರೌಡಿ ನಿಗ್ರಹ ದಳದ ಪಿಎಸ್‌ಐ ವಾಹೀದ್ ಕೋತ್ವಾಲ್‌ರಿಂದ ಆರೋಪಿ ಬಲಗಾಲಿಗೆ ಗುಂಡು ಹಾರಿಸಿದರು ಎನ್ನಲಾಗುತ್ತಿದೆ. ಇನ್ನು ಗಾಯಾಳು ಆರೋಪಿ ಭೀಮು ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಆರೋಪಿ ಭೀಮು ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ನಿವಾಸಿಯಾಗಿದ್ದು, ಬಾಬು ಮತ್ತು ಆತನ ಜೊತೆ ಮೂವರು ಸೇರಿ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡ್ತಾ ಇದ್ರು ಎನ್ನಲಾಗುತ್ತಿದೆ. ಬಂಧಿತನಿAದ 300 ಕೆಜಿಗೂ ಅಧಿಕ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

Related