ರಾಗಿಣಿ ಕುಟುಂಬಕ್ಕೆ ಆರ್ಥಿಕ ಸಂಕಷ್ಟ

ರಾಗಿಣಿ ಕುಟುಂಬಕ್ಕೆ ಆರ್ಥಿಕ ಸಂಕಷ್ಟ

ಬೆಂಗಳೂರು : ಡ್ರಗ್ ಜಾಲದಲ್ಲಿ ಭಾಗಿಯಾಗಿ ಜೈಲು ಸೇರಿರುವ ನಟಿ ರಾಗಿಣಿ ಕುಟುಂಬದವರಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಮನೆ ಹಾಗೂ ಕಾರುಗಳನ್ನು ಮಾರಾಟಕ್ಕಿಟ್ಟಿದ್ದಾರೆ.

ನಟಿ ರಾಗಿಣಿ ಪೋಷಕರು ಹಿಂದೆ ಮನೆಯನ್ನೇ ಮಾರಾಟ ಮಾಡಲು ಹೊರಟಿದ್ದು, ಅದನ್ನು ಯಾರೂ ಖರೀದಿ ಮಾಡದ ಹಿನ್ನೆಲೆಯಲ್ಲಿ ಕಾರುಗಳನ್ನು ಮಾರಲು ಮುಂದಾಗಿದ್ದಾರೆ.

ಹೈಕೋರ್ಟ್ನಲ್ಲಿ ರಾಗಿಣಿ ಜಾಮೀನು ಅರ್ಜಿ ವಜಾ ಆದ ಕಾರಣ ಕಾನೂನು ಹೋರಾಟ ನಡೆಸಲು ರಾಗಿಣಿ ಪೋಷಕರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮನೆ ಮತ್ತು ಕಾರುಗಳನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

ಆದ್ರೆ ಅದನ್ನು ಯಾರೂ ಖರೀದಿ ಮಾಡದ ಕಾರಣ ತಮ್ಮ ಮನೆಯಲ್ಲಿದ್ದ, ಇನ್ನೋವಾ ಹಾಗೂ ಮತ್ತೊಂದು ಕಾರನ್ನು ಮಾರಾಟಕ್ಕಿಟ್ಟಿದ್ದಾರೆ. ಇನ್ನೋವಾ ಕಾರಿಗೆ 9 ಲಕ್ಷ ಹಾಗೂ ಮತ್ತೊಂದು ಕಾರಿಗೆ 3 ಲಕ್ಷ ನಿಗದಿಪಡಿಸಿ ಮಾರಾಟ ಮಾಡಲು ಯತ್ನ ಮಾಡುತ್ತಿದ್ದಾರೆ.

Related