ಪೇಜಾವರ ಶ್ರೀಗಳಿಗೆ ಅಭಿವಂದನಾ ಸಮಾರಂಭ

ಪೇಜಾವರ ಶ್ರೀಗಳಿಗೆ ಅಭಿವಂದನಾ ಸಮಾರಂಭ

ಬೆಂಗಳೂರು: ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವಾರಿಗೆ ಭವ್ಯ ಸ್ವಾಗತ ಮತ್ತು ಅಭಿವಂದನಾ ಸಮಾರಂಭವನ್ನು ದಿನಾಂಕ 14/03/2024 ರಂದು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಆಯೋಜಿಸಲಾಗಿದೆ ಎಂದು ತಿರುಮಲಚಾರ್ಯ ರವರು ತಿಳಿಸಿದ್ದಾರೆ. ಅಯ್ಯೋಧ್ಯಾ ಬಾಲರಾಮ ಮಂಡಲೋತ್ಸವ ನೇತಾರ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರ ಅಭಿನಂದನಾ ಸಮಿತಿ ವತಿಯಿಂದ ಆಯೋಜಿಸಲಾಗಿದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಅಯೋಧ್ಯೆಯಲ್ಲಿ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರಟ್ರಸ್ಟ್ ಬಾಲರಾಮನ ಪ್ರತಿಷ್ಠೆಯ ನಂತರ 48 ದಿನಗಳ ಮಂಡಲೋತ್ಸವವನ್ನು ನಡೆಸಲು ತೀರ್ಮಾನಿಸಿ ಅದರ ನೇತೃತ್ವವನ್ನು ಪೇಜಾವರ ಮಠದ ಶ್ರೀಶ್ರೀ 1008 ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರಿಗೆ ನೀಡಿತು. ಅದು ಮಾರ್ಚ್ 10ರಂದು ಸಂಪನ್ನಗೊಂಡಿದೆ. ಅದರ ಸಮಾರೋಪದ ಅಂಗವಾಗಿ ರಾಮೋತ್ಸವವನ್ನು ಮತ್ತು ಬೆಂಗಳೂರು ನಾಗರಿಕರ ಪರವಾಗಿ ಶ್ರೀಪಾದರಿಗೆ ಭವ್ಯವಾದ ಪುರಪ್ರವೇಶ ಸ್ವಾಗತ ಹಾಗೂ ಅಭಿವಂದನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.  ಬಳಿಕ ಡಿ.ಪಿ. ಅನಂತ್ ಮಾತನಾಡಿ, ಇದೇ ತಿಂಗಳ 13 ರಂದು 3:30ಕ್ಕೆ ಪಿ.ಇ.ಎಸ್. ಕಾಲೇಜ್ ಹಿಂಭಾಗದ ನೈಸ್ ಟೋಲ್ ಬಳಿಯಿಂದ ಬೈಕ್ ರ್ಯಾಲಿ ಪ್ರಾರಂಭವಾಗಿ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದ ಸಮೀಪ ಮುಕ್ತಾಯವಾಗಲಿದೆ. ಮತ್ತು 4.30ಕ್ಕೆ ದೊಡ್ಡ ಬಸವನಗುಡಿ ದೇವಸ್ಥಾನದಿಂದ ಭವ್ಯ ಮೆರವಣಿಗೆ ನಡೆಯಲಿದ್ದು, ಸಂಜೆ 6.00ಕ್ಕೆ ಅಯೋಧ್ಯಾ ಬಾಲರಾಮ ಮಂಡಲೋತ್ಸವ ನೇತಾರ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರ ಅಭಿನಂದನಾ ಸಮಿತಿ ವತಿಯಿಂದ ಅಭಿವಂದನಾ ಸಮಾರಂಭವನ್ನು ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರು ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ

ಸಚಿವರಾದ ರಾಮಲಿಂಗಾರೆಡ್ಡಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯದ್ಯಕ್ಷ ಬಿ.ವೈ. ವಿಜಯೇಂದ್ರ ಆಗಮಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಿರಣ್ ಕುಮಾರ್, ಜೆ.ಹೆಚ್. ಅನಿಲ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related