ಫೆ. 2 ಹಂಪಿ ಉತ್ಸವ ಆರಂಭ

  • In State
  • January 31, 2024
  • 87 Views
ಫೆ. 2 ಹಂಪಿ ಉತ್ಸವ ಆರಂಭ

ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಉತ್ಸವ  ಇದೇ ಫೆಬ್ರುವರಿ 2 ತಾರೀಕಿನಿಂದ ಪ್ರಾರಂಭವಾಗಲಿದ್ದು, ಫೆಬ್ರುವರಿ 1ರಂದು ‘ಹಂಪಿ ಬೈ ಸ್ಕೈ’ ಹೆಲಿಕ್ಯಾಪ್ಟರ್ ಯಾನ ಮಾಡುವ ಮೂಲಕ ಹಂಪಿ ಉತ್ಸವಕ್ಕೆ ಈ ಬಾರಿ ಚಾಲನೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ಹೌದು, ಈ ಬಾರಿ ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವಂತಹ ಜಮೀರ್ ಅಹ್ಮದ್ ಅವರ ಹೆಲಿಕ್ಯಾಪ್ಟರ್ ಯಾನಕ್ಕೆ ಚಾಲನೆ ನೀಡುತ್ತಿದ್ದಾರೆ.

ಈ ಹೆಲಿಕಾಪ್ಟರ್‌ ಯಾನ ವಿಶ್ವ ಪಾರಂಪರಿಕ ತಾಣವನ್ನು ಆಗಸದಿಂದ ಉತ್ತಮವಾಗಿ ನೋಡಲು ಅವಕಾಶ ಕಲ್ಪಿಸುತ್ತದೆ ಎಂದು ವಿಜಯನಗರ ಜಿಲ್ಲಾಡಳಿತದ ಅಧಿಕಾರಿಗಳು ಹೇಳಿದ್ದಾರೆ.

ಈ ಹಿಂದೆ ಹೆಲಿಕಾಪ್ಟರ್ ಯಾನವನ್ನು ಉತ್ಸವ ದಿನದಂದೇ ಆರಂಭಿಸಲಾಗುತ್ತಿತ್ತು. ಆದರೆ, ಹಲವು ಪ್ರವಾಸಿಕರಿಗೆ ಅವಕಾಶಗಳು ಸಿಗುತ್ತಿರಲಿಲ್ಲ. ಹೀಗಾಗಿ ಹಿಂದಿ ದಿನವೇ ಆರಂಭಿಸಲಾಗುತ್ತಿದೆ. ಅಲ್ಲದೆ, ಹೆಲಿಕಾಪ್ಟರ್ ಯಾನದ ಅವಧಿಯನ್ನೂ ಕೂಡ 6 ನಿಮಿಷಗಳಿಂದ 8 ನಿಮಿಷಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

 

Related