ಬಾಡಿಗೆದಾರರಿಗೆ ಗುಡ್ ನ್ಯೂಸ್ ನೀಡಿದ ಇಂಧನ ಸಚಿವರು

ಬಾಡಿಗೆದಾರರಿಗೆ ಗುಡ್ ನ್ಯೂಸ್ ನೀಡಿದ ಇಂಧನ ಸಚಿವರು

ಬೆಂಗಳೂರು: ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯು ಕೂಡ ಒಂದಾಗಿದ್ದು, 200 ಯೂನಿಟ್ ವಿದ್ಯುತ್ ಉಚಿತ ಬಾಡಿಗೆದಾರರಿಗೂ ಇದೆಯಾ ಎಂಬ ಪ್ರಶ್ನೆಗೆ ಇಂಧನ ಇಲಾಖೆಯ ಸಚಿವರು ಜೆ ಕೆ ಜಾರ್ಜ್ ಅವರು ತೆರೆ ಎಳೆದಿದ್ದಾರೆ.

ಹೌದು, 200 ಯೂನಿಟ್​ ಉಚಿತ ವಿದ್ಯುತ್​ ವಿಚಾರದಲ್ಲಿ ಬಾಡಿಗೆದಾರರ ನಡುವೆ ಉಂಟಾಗಿದ್ದ ಗೊಂದಲಕ್ಕೆ ಇಂಧನ ಸಚಿವ ಕೆ.ಜೆ. ಜಾರ್ಜ್​ ತೆರೆಎಳೆದಿದ್ದಾರೆ. ಬಾಡಿಗೆದಾರರಿಗೂ ಉಚಿತ ವಿದ್ಯುತ್​ ಸಿಗಲಿದೆ ಎಂದು ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಬಾಡಿಗೆದಾರರಿಗೂ ಉಚಿತವಾಗಿ 200 ಯೂನಿಟ್​ ವಿದ್ಯುತ್ ದೊರೆಯುತ್ತದೆ ಎಂದರು.​ ಆದರೆ, ಬಾಡಿಗೆದಾರರು ಅರ್ಜಿ ಸಲ್ಲಿಸುವಾಗ ಸೂಕ್ತವಾದ ದಾಖಲೆಗಳು ಇರಬೇಕು ಎಂದು ತಿಳಿಸಿದರು.

ಎಷ್ಟು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ ಎಂಬ ದಾಖಲೆ ಕೊಡಬೇಕಾಗುತ್ತದೆ. ಇದರೊಂದಿಗೆ ವಿದ್ಯುತ್​​ ಬಿಲ್​ ಮತ್ತು ಬಾಡಿಗೆ ಕರಾರು ಪತ್ರವನ್ನು ಅರ್ಜಿಯ ಜತೆಗೆ ಒದಗಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಮನೆ ಮಾಲೀಕ ಕಡ್ಡಾಯವಾಗಿ ಆಸ್ತಿ ತೆರಿಗೆ ಕಟ್ಟಿರಬೇಕು. ಎಷ್ಟು ಬಾಡಿಗೆ ಮನೆಗಳಿವೆ ಎಂದು ಘೋಷಣೆ ಮಾಡಿರಬೇಕು. ಬಾಡಿಗೆದಾರರು ಕಳ್ಳಾಟ ಆಡಿರುವುದು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗವುದು ಎಂದು ಇಂಧನ ಸಚಿವರು ಎಚ್ಚರಿಕೆ ನೀಡಿದ್ದಾರೆ.

Related