ನಿಮ್ಮ ತೂಕ ಇಳಿಕೆಗೆ ಈ ಹಣ್ಣು ತಿನ್ನಿ

ನಿಮ್ಮ ತೂಕ ಇಳಿಕೆಗೆ ಈ ಹಣ್ಣು ತಿನ್ನಿ

ಬೆಂಗಳೂರು, ಮಾ. 14: ಇತ್ತೀಚಿನ ದಿನಗಳಲ್ಲಿ ನಾವು ತಿನ್ನುವ ಆಹಾರದಲ್ಲಿ ಸಮತೋಲನ ಇಲ್ಲದಿರುವ ಕಾರಣ ನಮ್ಮ ದೇಹದಲ್ಲಿ ಬೊಜ್ಜು ಎಂಬುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ ಆದ್ದರಿಂದ ಈ ಹಣ್ಣನ್ನು ನಾವು ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಹೌದು, ಈಗ ಎಲ್ಲರಿಗೂ ತೂಕ ಇಳಿಕೆ ಮಾಡುವುದೇ ಒಂದು ದೊಡ್ಡ ಚಿಂತೆಯಾಗಿದೆ.  ದಪ್ಪಗಿರುವವರು ಪೈನಾಪಲ್ ತಿನ್ನುವುದರಿಂದ ಇದು ನಮ್ಮ ದೇಹದಲ್ಲಿನ ಬೇಡದ ಕೊಬ್ಬನ್ನು ನಿವಾರಿಸುತ್ತದೆ. ಹಾಗೇ ಜೀರ್ಣಕ್ರೀಯೆಗೆ ಸಹಾಯ ಮಾಡುತ್ತದೆ. ಇದರಲ್ಲಿ ನಾರಿನಾಂಶ ಹೆಚ್ಚಿದೆ. ಹಾಗಾಗಿ ಮಲಬದ್ಧತೆ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.

ಪೈನಾಪಲ್ ತಿನ್ನುವುದರಿಂದ ಹೊಟ್ಟೆ ತುಂಬಿದಂತೆ ಆಗುತ್ತದೆ. ಹಾಗಾಗಿ ಪದೇ ಪದೇ ಏನಾದರೂ ತಿನ್ನಬೇಕು ಎಂದು ಅನಿಸುವುದಿಲ್ಲ. ಇನ್ನು ಇದರಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ಮುಖ ಹಾಗೂ ಕೂದಲಿನ ಆರೋಗ್ಯಕ್ಕೂ ಇದು ತುಂಬಾ ಒಳ್ಳೆಯದು.

ಇದರಲ್ಲಿ ಕ್ಯಾಲೋರಿ ಕಡಿಮೆ ಇದ್ದು ನಾರಿನಾಂಶ ಹೇರಳವಾಗಿದೆ. ಡಯೆಟ್ ಮಾಡುವವರಿಗೆ ಈ ಹಣ್ಣು ಹೇಳಿ ಮಾಡಿಸಿದ್ದು. ಊಟಕ್ಕೆ ಒಂದು ಗಂಟೆ ಮೊದಲು ಇದನ್ನು ಸೇವಿಸಿ. ಅಥವಾ ಊಟವಾದ 2 ಗಂಟೆ ನಂತರ ಇದನ್ನು ಸೇವಿಸಿದರೆ ತೂಕ ಇಳಿಕೆಗೆ ಸಹಾಯಕಾರಿಯಾಗುತ್ತದೆ.

Related