ಮಂಡ್ಯ: ಮಾಜಿ ನಗರಸಭೆ ಸದಸ್ಯ ಅನಿಲ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆತನ ಮೊದಲ ಹೆಂಡತಿ ಅಂಜಲಿ ಮಂಡ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಾಜಿ ನಗರಸಭೆ ಸದಸ್ಯ ಪುಡಾರಿಯಾಗಿದ್ದು, ರಾಜಕೀಯದಲ್ಲಿ ನನಗೆ ಮುಂದೆ ಭವಿಷ್ಯವಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದಿಂದ ನನಗೆ ಒಐಂ ಟಿಕೆಟ್ ಕೊಡುತ್ತಾರೆ ಎಂದು ಮೊದಲ ಹೆಂಡತಿಗೆ 20 ಲಕ್ಷ ರೂಪಾಯಿ ತೆಗೆದುಕೊಂಡು ಬರುವಂತೆ ಹಿಂಸಿಸಿದ್ದಾನೆ.
ಹಣವಿಲ್ಲದಿದ್ದರೆ ತಂದೆ ಕೊಟ್ಟಿರುವ ಮನೆಯನ್ನು ಮಾರಿ ದುಡ್ಡು ಕೊಡು ಎಂದು ದೈಹಿಕವಾಗಿ ಹಲ್ಲೆ ಮಾಡಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್ ಠಾಣೆ ಎದುರು ಹೇಳಿಕೊಂಡಿದ್ದಾರೆ.