ಐಪಿಎಲ್‌ ಆಡುವುದು ಡೌಟ್!

ಐಪಿಎಲ್‌ ಆಡುವುದು ಡೌಟ್!

ನವದೆಹಲಿ, ಮಾ.12 : ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಟಿ-20 ಟ್ವೆಂಕ್ರಿಕೆಟ್ ಟೂರ್ನಿಯು ಆರಂಭಕ್ಕಿನ್ನು ಕೆಲವೇ ಕೆಲವು ದಿನಗಳಷ್ಟೇ ಬಾಕಿ ಉಳಿದಿದೆ.  ಕೊರೊನಾ ವೈರಸ್ ಕರಿಛಾಯೆ ಮೂಡಿದೆ.

ಇದೀಗ ಬಂದಿರುವ ತಾಜಾ ಮಾಹಿತಿಗಳ ಪ್ರಕಾರ ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಭಾಗವಹಿಸುವುದೇ ಅನುಮಾನವೆನಿಸಿದೆ. ದೇಶದ್ಯಾಂತ ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ  ವೀಸಾ ನಿರ್ಬಂಧಗಳನ್ನು ವಿಧಿಸಿದೆ.ಇದರಿಂದಾಗಿ ವಿದೇಶಿ ಆಟಗಾರರಿಗೆ ನಿಗದಿತ ಸಮಯದೊಳಗೆ ಭಾರತಕ್ಕೆ ಆಗಮಿಸುವುದು ಕಷ್ಟಕರವೆನಿಸಲಿದೆ. ಇನ್ನೊಂದೆಡೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕಾಯುವಿಕೆ ತಂತ್ರವನ್ನು ಅನುಸರಿಸಬೇಕಿದೆ.
ಕೊರೊನಾ ವೈರಸ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಮತ್ತಷ್ಟು ಹರಡದಂತೆ ನಿಯಂತ್ರಿಸುವ ಹಿನ್ನೆಲೆಯಲ್ಲಿ ಎಪ್ರಿಲ್ 15ರ ವರೆಗೆ ರಾಜತಾಂತ್ರಿಕ ಹಾಗೂ ಉದ್ಯೋಗದಂತಹ ಕೆಲವು ವಿಭಾಗಗಳನ್ನು ಹೊರತುಪಡಿಸಿ ಚಾಲ್ತಿಯಲ್ಲಿರುವ ಎಲ್ಲ ವಿದೇಶಿ ವೀಸಾಗಳ ಮೇಲೆ ನಿಷೇಧ ಹೇರಿ ಕೇಂದ್ರ ಸರಕಾರವು ಹೊಸ ಶಿಫಾರಸನ್ನು ಹೊರಡಿಸಿದೆ. ವೀಸಾ ನಿರ್ಬಂಧವು ಮಾರ್ಚ್ 13ರಿಂದಲೇ ಜಾರಿಗೆ ಬರಲಿದೆ.

Related