ಹೊಸ ಅವತಾರದಲ್ಲಿ ದೂದ್ ಪೇಡ ದಿಗಂತ್!

ಹೊಸ ಅವತಾರದಲ್ಲಿ ದೂದ್ ಪೇಡ ದಿಗಂತ್!

ಬೆಂಗಳೂರು: ಹೊಸ ಅವತಾರದಲ್ಲಿ ಪ್ರೇಕ್ಷಕರ ಮನಗೆಲ್ಲಲು ಮಾರಿಗೋಲ್ಡ್ ಸಿನಿಮಾದ ಮೂಲಕ ಮತ್ತೆ ಅಭಿಮಾನಿಗಳನ್ನು ರಂಜಿಸಲು ದೂದ್ ಪೇಡ ದಿಗಂತವ್ರು ರೆಡಿಯಾಗಿದ್ದಾರೆ.

ಮಾರಿಗೋಲ್ಡ್ ಚಿತ್ರವೂ ಈಗಾಗಲೇ ಚಿತ್ರೀಕರಣ ಮುಕ್ತಾಯದ ಹಂತದಲ್ಲಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ.

ಇನ್ನು ಮಾರಿಗೋಲ್ಡ್ ಸಿನಿಮಾಗೆ ದಿಗಂತಿಗೆ ನಾಯಕಿಯಾಗಿ ಬಿಗ್ ಬಾಸ್ ಸೀಸನ್ 10ರ ಎರಡನೆಯ ರನ್ನರ್ ಅಪ್ ಆಗಿರುವ ಸಂಗೀತ ಅವರು ನಟಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಮಾರಿಗೋಲ್ಡ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಅಭಿಮಾನಿಗಳು ಈ ಟೀಸರ್ ಮೂಲಕ ಒಳ್ಳೆಯ ರೆಸ್ಪಾನ್ಸ್ ನೀಡಿದ್ದಾರೆ.

ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ಮಾಪಕ ರಘುವರ್ಧನ್, ನಾನು ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದರೂ, ಆರ್‌ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ‌ ರಘುವರ್ಧನ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

‘ಗೋಲ್ಡ್ ಬಿಸ್ಕೇಟ್ ಮಾರಲು ಹೋಗುವ ನಾಲ್ಕು ಜನರ ಕಥೆ ಈ ಸಿನಿಮಾದಲ್ಲಿದೆ. ನಾನು ಯಾವುದೇ ಸಂದೇಶ ಹೇಳುತ್ತಿಲ್ಲ. ಬರೀ ಮನರಂಜನೆ ಇಲ್ಲಿ ಮುಖ್ಯವಾಗಿರುತ್ತದೆ. ಕೋವಿಡ್ ಕಾರಣದಿಂದ ಸಿನಿಮಾ ಬಿಡುಗಡೆ ತಡವಾಯಿತು. ಈಗ ನಮ್ಮ ಸಿನಿಮಾವು ಬಿಡುಗಡೆಗೆ ರೆಡಿಯಾಗಿದೆ. ಇಲ್ಲಿ ದಿಗಂತ್ ಅವರನ್ನು ಬೇರೆ ರೀತಿ ತೋರಿಸುವ ಪ್ರಯತ್ನ ಮಾಡಲಾಗಿದೆ‌. ಅದಕ್ಕಾಗಿ ಚಿತ್ರೀಕರಣಕ್ಕೂ ಮುನ್ನ ದಿಗಂತ್ ಅವರು ರಿಹರ್ಸಲ್ ಮಾಡಿದ್ದರು’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ರಾಘವೇಂದ್ರ ಎಂ ನಾಯ್ಕ್.

 

Related