ಕಂಪ್ಯೂಟರ್ ಆಪರೇಟರ್ ವರ್ಗಾವಣೆಗೆ ಆಗ್ರಹ

ಕಂಪ್ಯೂಟರ್ ಆಪರೇಟರ್ ವರ್ಗಾವಣೆಗೆ ಆಗ್ರಹ

ಮುದ್ದೇಬಿಹಾಳ : ತಾಲೂಕಿನ ಢವಳಗಿ ಗ್ರಾಮದ ನಾಡಕಚೇರಿ ಕಂಪ್ಯೂಟರ್ ಆಪರೇಟರ್ ಪ್ರಕಾಶ ಕಟ್ಟಿಮನಿ ವಿಕಲಚೇತನರಿಗೆ ಮಾತ್ರವಲ್ಲದೇ ಇತರೇ ಸರಕಾರಿ ಕೆಲಸಕ್ಕೆ ಬರುವ ಇನ್ನಿತರ ಎಲ್ಲ ಸಾರ್ವಜನಿಕರಿಗೆ ನೀಡದೆ ಅನುಚಿತವಾಗಿ ವರ್ತಿಸುತ್ತಿದ್ದಾರೆ.

ಜತೆಗೆ ಹಣ ಕೊಟ್ಟವರಿಗೆ ಮಾತ್ರ ಕೆಲಸ ಮಾಡಿಕೊಡುತ್ತಾರೆ. ಅವರನ್ನು ಬೇರಕಡೆಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿ ತಾಲೂಕಾ ವಿಕಲಚೇತನ ಸಂಘದ ಪದಾಧಿಕಾರಿಗಳಿಂದ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.

ಕಳೆದ ಹಲವು ದಿನಗಳಿಂದ ತಾಲೂಕಿನ ಢವಳಗಿ ಗ್ರಾಮದಲ್ಲಿರುವ ನಾಡ ಕಚೇರಿಯಲ್ಲಿ ಸಾರ್ವಜನಿಕರು ಸಂಧ್ಯಾ ಸುರಕ್ಷಾ, ವಿಧವಾ ವೇತನ, ವೃದ್ಧಾಪ್ಯ ವೇತನ, ವಿಕಲಚೇತನ ವಿವಿಧ ವೇತನಗಳ ಮತ್ತು ಸರಕಾರಿ ಸೌಲಭ್ಯ ಪಡೆದುಕೊಳ್ಳಲು ಸರಕಾರ ದಾಖಲೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ತಾಲೂಕಿನ ಢವಳಗಿ ಗ್ರಾಮದ ನಾಡಕಚೇರಿ ಕಂಪ್ಯೂಟರ್ ಪ್ರಕಾಶ ಕಟ್ಟಿಮನಿ ಅವರು ಒಂದೊAದು ದಾಖಲೆ ಪಡೆದುಕೊಳ್ಳುವ 100 ರಿಂದ 1000ವರೆಗೆ ಹಣ ಬೇಡುತ್ತಾರೆ.

ಶಕ್ತರು ಹಣ ಕೊಟ್ಟು ದಾಖಲೆಗಳನ್ನು ಪಡೆದುಕೊಳ್ಳುತ್ತಾರೆ. ಆದರೇ ಅಂಗವಿಕಲರು, ಬಡವರು ಕೂಲಿ ಕಾರ್ಮಿಕರು ತಾವು ಸರಕಾರಿ ಸೌಲಭ್ಯ ಪಡೆದುಕೊಳ್ಳಲು ಹಣ ಕೊಟ್ಟು ದಾಖಲೆ ಪಡೆದುಕೊಳ್ಳಲು ಸಾಧ್ಯವಿಲ್ಲ.

ಈ ಕೂಡಲೇ ಪ್ರಕಾಶ ಕಟ್ಟಿಮನಿ ಅವರನ್ನು ವರ್ಗಾಯಿಸಬೇಕು. ವಿಕಲಚೇತರನ್ನು ಅಪಮಾನ ಮಾಡಿದ್ದನ್ನು ಗಂಭಿರವಾಗಿ ಪರಿಗಣಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Related