ರುಚಿ ರುಚಿಯಾದ ಮಶ್ರೂಮ್ ಬಿರಿಯಾನಿ

ರುಚಿ ರುಚಿಯಾದ ಮಶ್ರೂಮ್ ಬಿರಿಯಾನಿ

ಬಿರಿಯಾನಿ ಎಂದಕೊಡಲೇ ನಮಗೆ ನೆನಪಾಗುವುದೇ ಚಿಕನ್  ಅಥವಾ ಮಟನ್ ಬಿರಿಯಾನಿ ಪ್ರಪಂಚದಲ್ಲಿ ಶೇ 70 %  ಜನ ಮಾಂಸಹಾರಿಗಳು ಕೇವಲ ಶೇ 25 % ಜನ ಮಾತ್ರ ಸಸ್ಯಹಾರಿಗಳು ಇದ್ದಾರೆ. ಇತ್ತಿಚೀನ ದಿನಗಳಲ್ಲಿ ಮಶ್ರೂಮ್ ತುಂಬಾ ಬಳಕೆಯಾಗುತ್ತಿದ್ದು, ಇದು ಆರೋಗ್ಯಕರ ಆಹಾರ ಪಧಾರ್ಥವಾಗಿದೆ. ಮಶ್ರುಮ್ 23.80 ಗ್ರಾಂ/100 ಗ್ರಾಂ ಒಣ ತೂಕದ (DW) ಸರಾಸರಿ ಮೌಲ್ಯದೊಂದಿಗೆ ಹೆಚ್ಚಿನ ಪ್ರಮಾಣದ ಪ್ರೋಟೀನ್ ಅಂಶವನ್ನು ಹೊಂದಿರುತ್ತವೆ. ಅಣಬೆ ಪ್ರೋಟೀನ್ಗಳು ಇತ್ತೀಚೆಗೆ ಆಹಾರ ಉದ್ಯಮದಲ್ಲಿ ತಮ್ಮ ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯ ಮತ್ತು ಸಂಪೂರ್ಣ ಅಗತ್ಯ ಅಮೈನೋ ಆಮ್ಲಗಳ ದೃಷ್ಟಿಯಿಂದ ಸ್ವೀಕಾರವನ್ನು ಪಡೆದಿವೆ.

ಬಿರಿಯಾನಿ ಮಾಡುವ ವಿಧಾನ ಮತ್ತು ಬೇಕಾಗುವ ಸಾಮಾಗ್ರಿಗಳು

  • ಅಕ್ಕಿ- 1 ಬಟ್ಟಲು
  • ಮಶ್ರೂಮ್ – 150 ಗ್ರಾಂ
  • ಬಟಾಣಿ – 1 ಬಟ್ಟಲು
  • ಪುದೀನಾ ಸೊಪ್ಪು- ಸ್ವಲ್ಪ
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ಈರುಳ್ಳಿ- 1
  • ಟೊಮೆಟೋ -2
  • ಅಡುಗೆ ಎಣ್ಣೆ- ಸ್ವಲ್ಪ
  • ತುಪ್ಪ- ಸ್ವಲ್ಪ
  • ನಿಂಬೆ ಹಣ್ಣು- ಅರ್ಧ
  • ಮೊಸರು- 1 ಬಟ್ಟಲು
  • ಹಸಿ ಮೆಣಸಿನಕಾಯಿ- 2-3
  • ಚಕ್ಕೆ, ಲವಂಗ, ಏಲಕ್ಕಿ- ಸ್ವಲ್ಪ
  • ಕಸೂರಿ ಮೇಥಿ- ಸ್ವಲ್ಪ
  • ಖಾರದ ಪುಡಿ- 1 ಚಮಚ
  • ಗರಂ ಮಸಾಲೆ- ಕಾಲು ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ಸ್ವಲ್ಪ
  • ದನಿಯಾ ಪುಡಿ- ಅರ್ಧ ಚಮಚ

ಮಾಡುವ ವಿಧಾನ…

ಮೊದಲು ಒಲೆಯ ಮೇಲೆ ಒಂದು ಕುಕ್ಕರ್ ಇಟ್ಟು ಅಡುಗೆ ಎಣ್ಣೆ ಹಾಕಿ. ಅದು ಕಾದ ಮೇಲೆ ಸ್ವಲ್ಪ ಎಣ್ಣೆ, ಸ್ವಲ್ಪ ತುಪ್ಪ, ಚಕ್ಕೆ, ಲವಂಗ, ಏಲಕ್ಕಿ, ಕಸೂರಿ ಮೇಥಿ, ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಫ್ರೈ ಮಾಡಿ.

ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಪುದೀನಾ ಸೊಪ್ಪು, ಟೊಮೆಟೋ, ಕೊತ್ತಂಬರಿ ಸೊಪ್ಪು, ಖಾರದ ಪುಡಿ, ಗರಂ ಮಸಾಲೆ, ದನಿಯಾ ಪುಡಿ, ಮಶ್ರೂಮ್, ಬಟಾಣಿ ಹಾಕಿ ಫ್ರೈ ಮಾಡಿ. ನಂತರ ಉಪ್ಪು, ಮೊಸರು, ನೆನೆಸಿದ ಅಕ್ಕಿ ಅಳತೆ ನೀರು, ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಕುಕ್ಕರ್ ಮುಚ್ಚಳ ಮುಚ್ಚಿ 1 ವಿಜಿಲ್ ಬರಬೇಕು. ಈಗ ರುಚಿ ರುಚಿಕರವಾದ ಮಶ್ರೂಮ್ ಬಿರಿಯಾನಿ ಸವಿಯಲು ಸಿದ್ಧವಾಗಿದೆ.

Related