ಭ್ರಷ್ಟ ಅಧಿಕಾರಿಯ ಮನೆಯಲ್ಲಿತ್ತು ಕೋಟಿ, ಕೋಟಿ ಹಣ!

ಭ್ರಷ್ಟ ಅಧಿಕಾರಿಯ ಮನೆಯಲ್ಲಿತ್ತು ಕೋಟಿ, ಕೋಟಿ ಹಣ!

ಬೇನಾಮಿ ಹೆಸರಿನಲ್ಲಿ ಅಪಾರ ಆಸ್ತಿ ಇರುವ ಬಗ್ಗೆ ಎಸಿಬಿ ತೀವ್ರ ತನಿಖೆ ನಡೆಸುತ್ತಿದೆ. ಖಚಿತ ಮಾಹಿತಿ ಮೇರೆಗೆ ಸಿಐವಿ ಅಧಿಕಾರಿಗಳು ತೀವ್ರ ತನಿಖೆ ನಡೆಸಿದ್ದಾರೆ. ಇನ್ನು ಈ ತನಿಕೆಯಲ್ಲಿ ಸುಮಾರು ಕೋಟಿ ಕೋಟಿ ಹಣ ಮತ್ತು ಆಸ್ತಿ ಪತ್ತೆ ಆಗಿರುವುದರಿಂದ ಸಿಐವಿ ಅಧಿಕಾರಿಗಳೇ ಹೈರಾಣ ಆಗಿದ್ದಾರೆ.

ತೆಲಂಗಾಣದಲ್ಲಿ ಭ್ರಷ್ಟ ಅಧಿಕಾರಿಯ ಮನೆಯಲ್ಲಿತ್ತು ಕೋಟಿ ಕೋಟಿ ಹಣ. ಹೈದರಾಬಾದ್ ನಗರದಲ್ಲಿ ಎಸಿಬಿ ಅಧಿಕಾರಿಗಳು ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಮಹಾನಗರ ಅಭಿವೃದ್ಧಿ ಅಧಿಕಾರದ ಮಾಜಿ ನಿರ್ದೇಶಕರಾಗಿರುವ ಶಿವ ಬಾಲಕೃಷ್ಣ ಅವರ ಮನೆಯಲ್ಲಿ ಸುಮಾರು 40 ಲಕ್ಷ ನಗದು ಹಾಗೂ 100 ಕೋಟಿ ಮೌಲ್ಯದ ಆಸ್ತಿಯನ್ನು ಪತ್ತೆ ಮಾಡಿದ್ದಾರೆ.

ಹೌದು, ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ(ACB) ಹೈದರಾಬಾದ್​ನ ನಗರ ಯೋಜನಾ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ್ದು 40 ಲಕ್ಷ ರೂ. ನಗದು ಹಾಗೂ 100 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪತ್ತೆ ಮಾಡಿದ್ದಾರೆ.

ಇನ್ನು ಅಧಿಕಾರಿಗೆ ಸಂಬಂಧಿಸಿದ ಸ್ಥಳಗಳಲ್ಲಿ 14 ತಂಡಗಳು ಶೋಧ ನಡೆಸಿವೆ ಎಂದು ಭ್ರಷ್ಟಾಚಾರ ನಿಗ್ರಹ ದಳ ತಿಳಿಸಿದೆ. ಶೋಧ ಕಾರ್ಯ ಗುರುವಾರವೂ ಮುಂದುವರೆದಿದೆ ಎಂದು ಪಿಟಿಐ ವರದಿ ಮಾಡಿದೆ.

ಶಿವ ಬಾಲಕೃಷ್ಣ ಅವರು ತೆಲಂಗಾಣ ರಾಜ್ಯ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (TSRERA) ಕಾರ್ಯದರ್ಶಿ ಮತ್ತು ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ನಿರ್ದೇಶಕರಾಗಿದ್ದಾರೆ. 2 ಕೆಜಿಗೂ ಅಧಿಕ ಚಿನ್ನಾಭರಣ ಪತ್ತೆಯಾಗಿದೆ. ಮನೆಯಲ್ಲಿ 40 ಐಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಿವೆ. ಬ್ಯಾಂಕ್ ಠೇವಣಿ, ವಿಲ್ಲಾಗಳ ದಾಖಲೆಗಳು ಮತ್ತು ನಿವೇಶನಗಳನ್ನು ಜಪ್ತಿ ಮಾಡಲಾಗಿದೆ.

 

Related